alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಜಾಬ್ ಧರಿಸಿದ್ದ ಮಹಿಳೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ

hijab

ಅಮೆರಿಕದಲ್ಲಿ ಮುಸ್ಲಿಂ ಮಹಿಳೆಗೆ ಆಕೆ ಧರಿಸಿದ್ದ ಹಿಜಾಬ್ ತೆಗೆದು ಹಾಕದೇ ಇದ್ದಲ್ಲಿ ಬೆಂಕಿ ಹಚ್ಚುವುದಾಗಿ ಅಪರಿಚಿತನೊಬ್ಬ ಬೆದರಿಕೆ ಹಾಕಿದ್ದಾನೆ.

ಮಿಚಿಗನ್ ನಗರದ ಅನ್ ಅರ್ಬರ್ ಎಂಬಲ್ಲಿ ಅಪರಿಚಿತನೊಬ್ಬ ಮುಸ್ಲಿಂ ಮಹಿಳೆಯನ್ನು ಕೂಗಿ ಕರೆದಿದ್ದ, ಆಕೆಯ ಧರ್ಮವನ್ನು ಉಲ್ಲೇಖಿಸಿ ಕೂಡಲೇ ಹಿಜಾಬ್ ತೆಗೆಯುವಂತೆ ಸೂಚಿಸಿದ.

ಆತ 20-30 ವರ್ಷದೊಳಗಿನ ಯುವಕ, ಹೆಸರು ಹೇಳಿಲ್ಲ, ತಲೆ ಕೆದರಿತ್ತು, ದೇಹದಿಂದ ಗಬ್ಬು ವಾಸನೆ ಬರುತ್ತಿತ್ತು. ಆಕೆಗೆ ಬೆಂಕಿ ಹಚ್ಚುವುದಾಗಿ ಬೆದರಿಸಿ ಓಡುತ್ತಲೇ ಅಲ್ಲಿಂದ ತೆರಳಿದ್ದಾನೆ. ಆ ಸಮಯದಲ್ಲಿ ಆತ ಮದ್ಯಸೇವನೆ ಮಾಡಿದ್ದ ಎಂದು ಕೂಡ ಮಹಿಳೆ ಮಾಹಿತಿ ನೀಡಿದ್ದಾಳೆ.

ಡೊನಾಲ್ಡ್ ಟ್ರಂಪ್ ಗೆಲುವಿನ ಬೆನ್ನಲ್ಲೇ ನಡೆದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ. ಅನ್ ಅರ್ಬರ್ ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕಳೆದ ವಾರ ಮುಸ್ಲಿಂ ಶಾಲಾ ಶಿಕ್ಷಕಿಯೊಬ್ಬಳನ್ನು ಅವಳದ್ದೇ ಸ್ಕಾರ್ಫ್ ನಿಂದ ನೇಣಿಗೇರಿಸುವುದಾಗಿ ಬೆದರಿಕೆ ಪತ್ರ ಬಂದಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...