alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲೆ ಚಿತ್ರ ಬಹಿರಂಗ ಮಾಡ್ತಿನಂದವನಿಗೆ ಯುವತಿ ಕೊಟ್ಟ ಉತ್ತರವೇನು?

girl-44555ತನ್ನ ಬಾಯ್ ಫ್ರೆಂಡ್ ಗೆ ಕಳುಹಿಸಿದ್ದ ಕೆಲ ಖಾಸಗಿ ಚಿತ್ರಗಳು ತನಗೆ ಲಭ್ಯವಾಗಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸುವುದಾಗಿ ಬೆದರಿಕೆ ಒಡ್ಡಿದ್ದವನಿಗೆ ಯುವತಿ ಸೂಕ್ತ ಉತ್ತರ ನೀಡಿದ್ದಾಳೆ.

ಫೇಸ್ ಬುಕ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ತರುಣಾ ಆಸ್ವಾನಿ, ಆತ ಬಹಿರಂಗಪಡಿಸುವ ಫೋಟೋ ಹಾಗೂ ವಿಡಿಯೋಗಳು ಕೆಲವರಿಗೆ ಮನರಂಜನೆ ನೀಡಬಹುದು. ಆದರೆ ಇಂತಹ ಕ್ರಿಮಿಗಳ ಕುರಿತು ನಿಮಗೆ ಮಾಹಿತಿ ಇದ್ದರೆ ನನಗೆ ತಲುಪಿಸಿ ಎಂದು ತಮ್ಮ ಮೊಬೈಲ್ ನಂಬರ್ ಅನ್ನು ನೀಡಿದ್ದಾರೆ.

ಈ ಪೋಸ್ಟ್ ಈಗ ವೈರಲ್ ಆಗಿದ್ದು, ಇಂತಹ ಬ್ಲಾಕ್ ಮೇಲ್ ಗಳಿಗೆ ಒಳಗಾಗುವ ಯುವತಿಯರು ತರುಣಾ ಆಸ್ವಾನಿಯ ನಿಲುವನ್ನು ಅನುಸರಿಸಬೇಕೆಂದು ಹಲವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳು ಸದುಪಯೋಗವಾಗುವಷ್ಟೇ ದುರುಪಯೋಗವಾಗುತ್ತಿರುವ ಮಧ್ಯೆ ತರುಣಾ ಆಸ್ವಾನಿ ತೆಗೆದುಕೊಂಡ ನಿಲುವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೆರಿಕಾದ ಮೇರಿಲ್ಯಾಂಡ್ ನಲ್ಲಿರುವ ಮುಂಬೈನ ತರುಣಾ ಆಸ್ವಾನಿ, ಲಿಖಿತ ದೂರು ನೀಡಿದರೆ ಆರೋಪಿ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...