alex Certify
ಕನ್ನಡ ದುನಿಯಾ       Mobile App
       

Kannada Duniya

ನಿದ್ದೆಗಣ್ಣಿನಲ್ಲಿ ನಡೆದು ಹೋಯ್ತು ಘೋರ ಅಪರಾಧ

ನಾರ್ತ್ ಕೆರೋಲಿನಾದಲ್ಲಿ ಯುವಕನೊಬ್ಬ ನಿದ್ದೆಯ ಮಂಪರಿನಲ್ಲಿ ಪತ್ನಿಯನ್ನು ಹತ್ಯೆ ಮಾಡಿಬಿಟ್ಟಿದ್ದಾನೆ. 911ಗೆ ಕರೆಮಾಡಿದ್ದ 27 ವರ್ಷದ ಮ್ಯಾಥ್ಯೂ ಫೆಲ್ಪ್ಸ್ ತನ್ನ ಪತ್ನಿಯನ್ನು ನಾನೇ ಕೊಂದಿದ್ದೇನೆ ಎನಿಸುತ್ತಿದೆ ಅಂತಾ ಹೇಳಿದ್ದಾನೆ. ಅಷ್ಟೇ ಅಲ್ಲ ರೂಮಿನ ತುಂಬಾ ರಕ್ತ ಚೆಲ್ಲಾಡಿದೆ, ಪತ್ನಿ ರೇಲಿಯಲ್ಲಿ ಕೊಂಚವೂ ಚಲನೆಯೇ ಇಲ್ಲ ಅಂತಾ ಪೊಲೀಸರಿಗೆ ತಿಳಿಸಿದ್ದಾನೆ.

ಕೂಡಲೇ ಪೊಲೀಸರು ಸ್ಥಳಕ್ಕೆ ಬಂದ್ರು. ರೇಲಿ ರಕ್ತದ ಮಡುವಿನಲ್ಲಿ ಬಿದ್ದಿದ್ಲು. ಆಕೆಯ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯಗಳಿದ್ವು. ಆಸ್ಪತ್ರೆಗೆ ಕರೆದೊಯ್ಯಲಾಯ್ತು, ಆದ್ರೆ ಅಷ್ಟರಲ್ಲಾಗ್ಲೇ ರೇಲಿ ಮೃತಪಟ್ಟಿದ್ಲು. ಮಲಗುವ ಮುನ್ನ ಮ್ಯಾಥ್ಯೂ ಕೆಮ್ಮಿಗೆ ಔಷಧ ತೆಗೆದುಕೊಂಡಿದ್ದ. ಕೆಮ್ಮು ಜಾಸ್ತಿ ಇದ್ದಿದ್ರಿಂದ ಸ್ವಲ್ಪ ಜಾಸ್ತಿ ಡೋಸೇಜ್ ಸೇವಿಸಿಬಿಟ್ಟಿದ್ದ.

ಆ ಔಷಧದಿಂದ ಒಂದು ರೀತಿಯ ಅಮಲೇರಿತ್ತು. ನಿದ್ದೆಯ ಮಂಪರಿನಲ್ಲಿ ಮ್ಯಾಥ್ಯೂ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಆತನ ಅರಿವಿಗೆ ಬಾರದಂತೆ ಈ ಕೃತ್ಯ ನಡೆದಿದೆ. ಎಷ್ಟೋ ಹೊತ್ತಿನ ಬಳಿಕ ಅವನಿಗೆ ಎಚ್ಚರವಾಗಿತ್ತು. ಮ್ಯಾಥ್ಯೂ ಹಾಗೂ ರೇಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು.

ಕಳೆದ ನವೆಂಬರ್ ನಲ್ಲಿ ವಿವಾಹ ನೆರವೇರಿತ್ತು. ರೇಲಿ ತುಂಬಾ ಮೃದು ಸ್ವಭಾವದ ಯುವತಿ. ಆಕೆ ಈ ರೀತಿ ಗಂಡನ ಕೈಯಲ್ಲೇ ದುರಂತ ಸಾವು ಕಂಡಿರೋದು ಸ್ನೇಹಿತೆಯರಿಗೆ ತೀವ್ರ ಆಘಾತ ತಂದಿದೆ. ಪತ್ನಿ ಹತ್ಯೆ ಆರೋಪದ ಮೇಲೆ ಮ್ಯಾಥ್ಯೂನನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...