alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿದಿನ ವಿಮಾನದಲ್ಲಿ ಕಚೇರಿಗೆ ಹೋಗ್ತಾನೆ ಈತ

man_1500111423_618x347

ಲಾಸ್ ಏಂಜಲೀಸ್ ನಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ಪ್ರತಿದಿನ ವಿಮಾನದ ಮೂಲಕ ಕಚೇರಿಗೆ ಹೋಗ್ತಾರೆ. ಕರ್ಟ್ ವಾನ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. ಹೈಟೆಕ್ ಕಂಪನಿಯೊಂದರ ಸಹ-ಸಂಸ್ಥಾಪಕ. ಕರ್ಟ್ ಕಚೇರಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದೆ.

ಕರ್ಟ್ ಗೆ ಕಚೇರಿಗೆ ಹೋಗಿ ಬರಲು 6 ಗಂಟೆ ಬೇಕು. ವಿಮಾನವನ್ನು ಗುತ್ತಿಗೆ ಪಡೆದ್ರೆ ತಿಂಗಳಿಗೆ ಒಂದುವರೆ ಲಕ್ಷ ರೂಪಾಯಿ ಬಾಡಿಗೆ ನೀಡಬೇಕು. ಹಾಗಾಗಿ ಸಿಂಗಲ್ ಎಂಜಿನ್ ವಿಮಾನ ಖರೀದಿ ಮಾಡಿದ್ದಾರೆ. ಬಾಡಿಗೆ ನೀಡುವ ಹಣದಲ್ಲಿ ಮನಸ್ಸಿಗೆ ಬಂದಲ್ಲಿ ಸುತ್ತಾಡಬಹುದು ಎಂಬ ಪ್ಲಾನ್ ಇವರದ್ದು.

ಮನೆಯಿಂದ ವಿಮಾನ ನಿಲ್ದಾಣದವರೆಗೆ ಟರ್ಕ್ ಡ್ರೈವ್ ಮಾಡಬೇಕಾಗುತ್ತದೆ. ವಾರದಲ್ಲಿ ಐದು ದಿನ ಕಚೇರಿಗೆ ಹೋಗ್ತಾರೆ ಟರ್ಕ್. ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಭದ್ರತೆ ಚೆಕ್ ಮಾಡುವುದಿಲ್ಲ. ಪಾರ್ಕಿಂಗ್ ಸ್ಥಳದಿಂದ ನೇರವಾಗಿ ವಿಮಾನವೇರಲು ಅವಕಾಶವಿದೆ.

ಕಚೇರಿಗೆ ವಿಮಾನದಲ್ಲಿ ಹೋಗ್ತೇನೆಂದ್ರೆ ಯಾರೂ ನಂಬುವುದಿಲ್ಲವಂತೆ. ಸಮಯ ಉಳಿಸಲು ಇದು ಬೆಸ್ಟ್ ಎನ್ನುತ್ತಾರೆ ಟರ್ಕ್. ಬೆಳಿಗ್ಗೆ 5.30 ಕ್ಕೆ ವಿಮಾನವೇರುವ ಟರ್ಕ್ 8.30 ಕ್ಕೆ ಕಚೇರಿಗೆ ಹೋಗ್ತಾರಂತೆ. ಸಂಜೆ 5 ಕ್ಕೆ ಅಲ್ಲಿಂದ ಹೊರಟ್ರೆ ರಾತ್ರಿ 9 ಗಂಟೆಗೆ ಮನೆಗೆ ಬರ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...