alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ನಲ್ಲಿ ಟ್ಯಾಗ್ ಮಾಡಿದ್ದವನೀಗ ಜೈಲು ಪಾಲು

fb_imageಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯಾವುದಾದರೂ ಫೋಟೋಗೆ ಟ್ಯಾಗ್ ಮಾಡುವ ಮುನ್ನ ಬಳಕೆದಾರರು ಕೊಂಚ ಯೋಚಿಸುವಂತೆ ಮಾಡಿದೆ ಈ ಪ್ರಕರಣ. ಗಲಭೆಯೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಟ್ಯಾಗ್ ಮಾಡಿದ ಕಾರಣಕ್ಕೆ ವರ್ಷದ ಬಳಿಕ ಅರೆಸ್ಟ್ ಆಗಿದ್ದಾನೆ.

ಉತ್ತರ ಐಲ್ಯಾಂಡ್ ನಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ರಾಬರ್ಟ್ ಎಂಬಾತ ಕಳೆದ ವರ್ಷ ನಡೆದಿದ್ದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಪಾಲ್ಗೊಂಡಿದ್ದ. ಈ ಗಲಭೆ ವೇಳೆ ಪೊಲೀಸರ ಮೇಲೆ ಕಲ್ಲು, ಬಾಟಲಿಗಳನ್ನು ಪ್ರತಿಭಟನಾಕಾರರು ತೂರಿದ್ದ ಕಾರಣ ಸುಮಾರು 29 ಮಂದಿ ಪೊಲೀಸರು ಗಾಯಗೊಂಡಿದ್ದರು.

ಗಲಭೆಯಲ್ಲಿ ಪಾಲ್ಗೊಂಡಿದ್ದವರನ್ನು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಬಂಧಿಸಿದ್ದರು. ಆದರೆ ಬುದ್ದಿವಂತ ರಾಬರ್ಟ್, ಸಿಸಿ ಟಿವಿಯಲ್ಲಿ ಕಾಣದಂತೆ ತನ್ನ ಮುಖ ಮುಚ್ಚಿಕೊಂಡಿದ್ದ ಕಾರಣ ಅನುಮಾನವಿದ್ದರೂ ಸಾಕ್ಷ್ಯವಿರದ ಕಾರಣ ಪೊಲೀಸರು ಸುಮ್ಮನಾಗಿದ್ದರು. ಆದರೆ ರಾಬರ್ಟ್ ಮಾಡಿದ ಒಂದು ತಪ್ಪು ಈಗ ಬಂಧನಕ್ಕೊಳಗಾಗುವಂತೆ ಮಾಡಿದೆ. ಅಂದು ನಡೆದ ಗಲಭೆಯ ಚಿತ್ರವೊಂದಕ್ಕೆ ರಾಬರ್ಟ್ ಟ್ಯಾಗ್ ಮಾಡಿದ್ದು, ಇದನ್ನು ಗಮನಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದೀಗ ಆತನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...