alex Certify
ಕನ್ನಡ ದುನಿಯಾ       Mobile App
       

Kannada Duniya

ಫುಡ್ ಬ್ಯಾಂಕ್ ಗೆ ಪಿಜ್ಜಾ ದಾನ ಮಾಡ್ತಿದ್ದಾನೆ ಕ್ಯಾನ್ಸರ್ ರೋಗಿ

pizza-stock

ಪೆನ್ಸಿಲ್ವೇನಿಯಾದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಫುಡ್ ಬ್ಯಾಂಕ್ ಗೆ ಒಂದು ವರ್ಷದವರೆಗೆ ಪಿಜ್ಜಾ ದಾನ ಮಾಡಲು ನಿರ್ಧರಿಸಿದ್ದಾನೆ.

36 ವರ್ಷದ ಜೋಶ್ ಕ್ಯಾಟ್ರಿಕ್ ನಾರ್ಥಂಪ್ಟನ್ ನಿವಾಸಿ. ಅದೇ ಏರಿಯಾದಲ್ಲಿದ್ದ ರೆಸ್ಟೋರೆಂಟ್ ಒಂದು ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಆ ಸ್ಪರ್ಧೆಯಲ್ಲಿ ಗೆದ್ದಿರುವ ಜೋಶ್ ಗೆ ರೆಸ್ಟೋರೆಂಟ್ ವತಿಯಿಂದ ಬಹುಮಾನವಾಗಿ ಒಂದು ವರ್ಷ ಉಚಿತವಾಗಿ ಪಿಜ್ಜಾ ವಿತರಿಸಲಾಗುತ್ತದೆ.

ಆ ಪಿಜ್ಜಾವನ್ನು ನಾರ್ಥಂಪ್ಟನ್ ಫುಡ್ ಬ್ಯಾಂಕ್ ಗೆ ದಾನ ಮಾಡುವುದಾಗಿ ಜೋಶ್ ಪ್ರಕಟಿಸಿದ್ದ. ಹಾಗಾಗಿ ಮಾರಿಯೋಸ್ ಪಿಜ್ಜಾ ರೆಸ್ಟೋರೆಂಟ್ ಮಾಲೀಕರು ಬಹುಮಾನವನ್ನು ಡಬಲ್ ಮಾಡಿದ್ದಾರೆ, ಜೋಶ್ ಹಾಗೂ ಫುಡ್ ಬ್ಯಾಂಕ್ ಗೆ ಒಂದು ವರ್ಷ ಉಚಿತವಾಗಿ ಪಿಜ್ಜಾ ವಿತರಿಸಲಿದ್ದಾರೆ.

ಈ ಸ್ಪರ್ಧೆಯಲ್ಲಿ 1200 ಮಂದಿ ಪಾಲ್ಗೊಂಡಿದ್ರು, ಅವರನ್ನೆಲ್ಲ ಹಿಂದಿಕ್ಕಿ ಗೆಲುವು ಸಾಧಿಸಿರುವ ಜೋಶ್, ತನ್ನ ಸ್ನೇಹಿತರು, ಕುಟುಂಬದವರು ಮತ್ತು ಆತ್ಮೀಯರಿಗೆಲ್ಲ ಪಿಜ್ಜಾ ವಿತರಿಸಲು ಮುಂದಾಗಿದ್ದಾನೆ. ಕೋಲನ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಜೋಶ್ ಗೆ ಈ ಗೆಲುವು ಕೊಂಚ ಭರವಸೆ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...