alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮುಂದೆ ಬಯಲಾಯ್ತು ವಯಾಗ್ರದ ಸತ್ಯ: ಪತಿ ಮಾಡ್ದ ಈ ಕೆಲಸ

ಅಮೆರಿಕಾ ವ್ಯಕ್ತಿಯೊಬ್ಬ ನ್ಯೂಯಾರ್ಕ್ ನ ಔಷಧಿ ಮಳಿಗೆಯೊಂದರ ವಿರುದ್ಧ ದೂರು ನೀಡಿದ್ದಾನೆ. ವಯಾಗ್ರ ಖರೀದಿ ಮಾಡಿದ್ದ ಸಂಗತಿಯನ್ನು ವ್ಯಕ್ತಿಯ ಪತ್ನಿಗೆ ಔಷಧಿ ಮಳಿಗೆ ತಿಳಿಸಿದೆ. ಇದ್ರಿಂದ ತನ್ನ ದಾಂಪತ್ಯ ಮುರಿದು ಬಿದ್ದಿದೆ ಎಂದು ವ್ಯಕ್ತಿ ಆರೋಪ ಮಾಡಿದ್ದಾನೆ.

ಹಿಂದಿನ ವರ್ಷ ಮೈಕಲ್ ಫೇನ್ವರ್ಗ್ ಎಂಬಾತ ಸಿವಿಎಸ್ ಔಷಧಿ ಮಳಿಗೆಯಿಂದ 100 ಎಂಜಿ ವಯಾಗ್ರದ ಐದು ಡಬ್ಬವನ್ನು ಖರೀದಿ ಮಾಡಿದ್ದನಂತೆ. ಬಿಲ್ ನಲ್ಲಿ ವಯಾಗ್ರವೆಂದು ನಮೂದಿಸದಂತೆ ಮೈಕಲ್ ಹೇಳಿದ್ದ ಎನ್ನಲಾಗಿದೆ. ಆದ್ರೂ ಔಷಧಿ ಮಳಿಗೆಯವರು ವಯಾಗ್ರವೆಂದು ಬರೆದಿದ್ದಾರೆ.

ಕೆಲ ದಿನಗಳ ನಂತ್ರ ಮೈಕಲ್ ಪತ್ನಿ ಔಷಧಿ ವಿಚಾರಕ್ಕೆ ಸಿವಿಎಸ್ ಗೆ ಕರೆ ಮಾಡಿದ್ದಾಳೆ. ಆಗ ಅಲ್ಲಿದ್ದ ಸಿಬ್ಬಂದಿ ವಯಾಗ್ರದ ಸುದ್ದಿ ಹೇಳಿದ್ದಾನೆ. ಇದ್ರಿಂದ ದಾಂಪತ್ಯ ಮುರಿದು ಬಿದ್ದಿದೆ. ಖಾಸಗಿ ವಿಚಾರವನ್ನು ಔಷಧಿ ಮಳಿಗೆಯವರು ಜಗಜ್ಜಾಹಿರ ಮಾಡಿದ್ದಾರೆ. ಇದ್ರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಪತ್ನಿ ಬಿಟ್ಟು ಹೋಗಿದ್ದಾಳೆಂದು ಮೈಕಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...