alex Certify
ಕನ್ನಡ ದುನಿಯಾ       Mobile App
       

Kannada Duniya

ಮಸೀದಿಯಲ್ಲಿ ಹಣ ಕದ್ದ ಕಳ್ಳನ ಪತ್ರದಲ್ಲಿತ್ತು ಇಂಟ್ರೆಸ್ಟಿಂಗ್ ವಿಷಯ

People offer evening prayer at a mosque ahead of the Muslim month of Ramadan, in Karachi, Pakistan, Sunday, June 5, 2016. Muslims across the world will be observing the holy fasting month of Ramadan, when they refrain from eating, drinking and smoking from dawn to dusk. (AP Photo/Shakil Adil)

ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ಮಸೀದಿಯ ದೇಣಿಗೆ ಪೆಟ್ಟಿಗೆಯಲ್ಲಿದ್ದ 50,000 ರೂಪಾಯಿ ಹಣವನ್ನು ಕದ್ದಿದ್ದಾನೆ. ಇದು ನನಗೆ ಮತ್ತು ದೇವರಿಗೆ ಸಂಬಂಧಪಟ್ಟ ವಿಷಯ, ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡಬೇಡಿ ಅಂತಾ ನೋಟ್ ಒಂದನ್ನು ಬರೆದಿಟ್ಟು ಹೋಗಿದ್ದಾನೆ.

ದಕ್ಷಿಣ ಪಂಜಾಬ್ ನ ಖಾನೆವಾಲ್ ಜಿಲ್ಲೆಯ ಜಾಮಿಯಾ ಮಸ್ಜಿದ್ ಸದಿಕಲ್ ಮದೀನಾದಲ್ಲಿ ಈ ಘಟನೆ ನಡೆದಿದೆ. ಭಕ್ತರು ನೀಡಿದ್ದ ಕಾಣಿಕೆಗಳನ್ನು ತುಂಬಿಟ್ಟಿದ್ದ ಎರಡು ಪೆಟ್ಟಿಗೆ ಹಾಗೂ ವಿದ್ಯುತ್ ಇಲ್ಲದೇ ಇದ್ದಾಗ ಲೈಟಿಂಗ್ ಗಾಗಿ ಬಳಸಿಕೊಳ್ತಾ ಇದ್ದ ಎರಡು ಬ್ಯಾಟರಿಗಳನ್ನು ಕಳ್ಳ ಹೊತ್ತೊಯ್ದಿದ್ದಾನೆ.

‘ಇದು ನನಗೆ ಮತ್ತು ದೇವರಿಗೆ ಸಂಬಂಧಪಟ್ಟ ವಿಚಾರ. ದಯವಿಟ್ಟು ಯಾರೂ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನನಗೆ ತುಂಬಾ ಅಗತ್ಯವಿದ್ದುದರಿಂದ ಅಲ್ಲಾಹುವಿನ ಮನೆಯಿಂದ ಹಣ ತೆಗೆದುಕೊಂಡಿದ್ದೇನೆ’ ಅಂತಾ ಕಳ್ಳ ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾನೆ. ಈ ಹಿಂದೆ ಮಸೀದಿಗೆ ಬಂದಿದ್ದ ಕಳ್ಳ, ಪ್ರಾರ್ಥನೆ ಮಾಡುವ ಮುಖ್ಯಸ್ಥರ ಬಳಿ ನೆರವು ಕೇಳಿದ್ದನಂತೆ.

ಆದ್ರೆ ಆತ ಸಹಾಯ ಮಾಡಲು ನಿರಾಕರಿಸಿದ್ದಲ್ಲದೆ, ಅವನನ್ನು ಹೊರಕ್ಕೆ ಹಾಕಿಸಿದ್ದ. ‘ಜನರು ನನಗೆ ಸಹಾಯ ಮಾಡಲು ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಮಸೀದಿಯಲ್ಲಿ ಕಳವು ಮಾಡಬೇಕಾಯ್ತು. ನಾನು ಯಾರ ಮನೆಗೂ ಕನ್ನ ಹಾಕಿಲ್ಲ. ಅಲ್ಲಾಹುವಿನ ಸನ್ನಿಧಿಯಿಂದ ತೆಗೆದುಕೊಂಡಿದ್ದೇನೆ ಅಷ್ಟೆ, ಈ ವಿಷಯದಲ್ಲಿ ಯಾರೂ ಮೂಗು ತೋರಿಸಬೇಡಿ’ ಅಂತಾ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

ಪತ್ರ ಓದಿದ ಜನರು ಕಳ್ಳನನ್ನು ಕ್ಷಮಿಸಿ ಪ್ರಕರಣವನ್ನು ಇಲ್ಲಿಗೆ ಕೈಬಿಡುವಂತೆ ಮಸೀದಿ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಮಸೀದಿಗೆ ಹೊಸದಾಗಿ ಬ್ಯಾಟರಿ ಖರೀದಿಸಿ ಕೊಡುವುದಾಗಿ ಹೇಳಿದ್ದಾರೆ. ಆದ್ರೆ ಮಸೀದಿ ಮುಖ್ಯಸ್ಥರು ಮಾತ್ರ ಕಳ್ಳನನ್ನು ಹುಡುಕಿ ಶಿಕ್ಷೆ ವಿಧಿಸಬೇಕು ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...