alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆ ಮಾಡಿಕೊಳ್ಳಲು ವಿಮಾನವನ್ನೇ ಕದ್ದ…!

ಕಾರು, ಬೈಕ್‌ಗಳನ್ನು ಕಳ್ಳತನ ಮಾಡುವುದು ಸಹಜ. ವಾಷಿಂಗ್ಟನ್‌ನ ಅಲಸ್ಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರೋಪ್ಲೇನ್‌ ಮೆಕಾನಿಕ್‌ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ವಿಮಾನವನ್ನೇ ಕದ್ದಿದ್ದಾನೆ.

ವಿಮಾನದ ತಾಂತ್ರಿಕ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯೋರ್ವ ವಿಮಾನವನ್ನು ಅನುಮತಿ ಇಲ್ಲದೇ ಟೇಕ್‌ ಆಫ್‌ ಮಾಡಿದ್ದಾನೆ. ಅದೃಷ್ಟವಷಾತ್‌ ಇದರಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

29 ವರ್ಷದ ಮೆಕಾನಿಕ್‌, ಹಾರಿಜಾನ್‌ ಕ್ಯು400 ವಿಮಾನವನ್ನು ಏರ್‌ ಟ್ರಾಫಿಕ್‌ ಕಂಟ್ರೋಲ್‌ ನ ಅನುಮತಿ ಪಡೆಯದೇ ಟೇಕ್‌ ಆಫ್‌ ಮಾಡಿದ್ದು, ಕೆಲ ದೂರ ಹಾರಾಟ ನಡೆಸಿ, ಬಳಿಕ ನೆಲಕ್ಕೆ ಅಪ್ಪಳಿಸುವ ಮೂಲಕ ಸಾವನ್ನಪ್ಪಿದ್ದಾನೆ.

ಇದು ಭಯೋತ್ಪಾದನಾ ಕೃತ್ಯ ಅಲ್ಲ. ಅವನ ಮಾತುಗಳೆಲ್ಲವೂ ಸಂವಹನ ಮಾಧ್ಯಮದಲ್ಲಿ ದಾಖಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ. ಈ ನಾಟಕೀಯ ಘಟನೆಯಿಂದಾಗಿ ಏರ್‌ಪೋರ್ಟ್‌ನಲ್ಲಿ ಕೆಲ ಕಾಲ ಆತಂಕದ ವಾರಾವರಣ ಸೃಷ್ಟಿಯಾಗಿತ್ತು. ಅಲ್ಲದೆ ಉಗ್ರರ ದಾಳಿಯ ಬಗ್ಗೆ ಭಯ ಹುಟ್ಟಿತ್ತು. ಹೀಗಾಗಿ ಕೆಲ ಹೊತ್ತು ಸಾಮಾನ್ಯ ವಿಮಾನ ಸಂಚಾರಗಳನ್ನು ರದ್ದುಪಡಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...