alex Certify
ಕನ್ನಡ ದುನಿಯಾ       Mobile App
       

Kannada Duniya

ಸೇಡು ತೀರಿಸಿಕೊಳ್ಳಲು 9 ಮಕ್ಕಳನ್ನು ಬಲಿ ಪಡೆದ ಯುವಕ

ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಯುವಕನೊಬ್ಬ ಶಾಲಾ ಮಕ್ಕಳ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 9 ಮಕ್ಕಳು ಸಾವನ್ನಪ್ಪಿವೆ. 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿವೆ. ಶಾಲೆಯಲ್ಲಿ ನಡೆದ ಅವಮಾನಕ್ಕೆ ಪ್ರತೀಕಾರವಾಗಿ ಯುವಕ ಹೀಗೆ ಮಾಡಿದ್ದಾನೆ ಎನ್ನಲಾಗ್ತಿದೆ.

ಬಿಬಿಸಿ ವರದಿ ಪ್ರಕಾರ ಘಟನೆ ಶುಕ್ರವಾರ ನಡೆದಿದೆಯಂತೆ. ದಾಳಿ ನಡೆಸಿದ ಯುವಕನ ವಯಸ್ಸು 28 ವರ್ಷ. ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಲಿಯಿನ್ ಪಟ್ಟಣದ ನಂಬರ್ 3 ರ ಶಾಲೆಯಲ್ಲಿ ಘಟನೆ ನಡೆದಿದೆ. ಸ್ಕೂಲ್ ಮುಗಿಸಿ ಮನೆಗೆ ಹೋಗ್ತಿದ್ದ ಮಕ್ಕಳ ಮೇಲೆ ಯುವಕ ದಾಳಿ ನಡೆಸಿದ್ದಾನೆ. ಚೀನಾದಲ್ಲಿ ಶಾಲಾ ಮಕ್ಕಳ ಮೇಲೆ ನಡೆದ ಅತಿ ದೊಡ್ಡ ದಾಳಿ ಇದಾಗಿದೆ.

ಮೃತರಲ್ಲಿ 7 ಮಂದಿ ಬಾಲಕಿಯರಾಗಿದ್ದಾರೆ. ಅವ್ರ ವಯಸ್ಸು 12-15 ವರ್ಷ ಎನ್ನಲಾಗಿದೆ. ಆರೋಪಿ ಇದೇ ಶಾಲೆಯಲ್ಲಿ ಓದಿದ್ದ ಎನ್ನಲಾಗಿದೆ. ಆ ವೇಳೆ ಶಾಲೆಯಲ್ಲಿ ಅವಮಾನ ಮಾಡಲಾಗಿತ್ತಂತೆ. ಅದ್ರ ಸೇಡು ತೀರಿಸಿಕೊಳ್ಳಲು ಯುವಕ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...