alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರ ವಿಚಿತ್ರ ಹಚ್ಚೆಗೆಂದೇ ಭಾರಿ ವೆಚ್ಚ ಮಾಡಿದ ಭೂಪ…!

ಇತ್ತೀಚೆಗೆ ಹಚ್ಚೆ ಪ್ರಿಯರು ಹೆಚ್ಚುತ್ತಿದ್ದಾರೆ. ಸಾಮಾನ್ಯವಾಗಿ ಅಂಥವರು ಹೆಚ್ಚೆಂದರೆ ಎರಡೋ ಮೂರೋ ಟ್ಯಾಟೂಗಳನ್ನು ಹಾಕಿಸಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ ಭೂಪ ಮೈತುಂಬಾ ಟ್ಯಾಟೂ ಹಾಕಿಸಿಕೊಂಡು, ಅದಕ್ಕೆಂದೇ 28 ಸಾವಿರ ಡಾಲರ್ ಖರ್ಚು ಮಾಡಿದ್ದಾನೆ.

ಅಮೆರಿಕದ ಕ್ರಿಸ್ ಡಾಲ್ಜೆಲ್ ಎಂಬ ಶೆಫ್(ಬಾಣಸಿಗ) ತಲೆ-ಮುಖ ಸೇರಿ ಮೈತುಂಬಾ ಹಚ್ಚೆ ಹಾಕಿಸಿಕೊಂಡಿದ್ದಾನೆ. ಹಾಗಂತ ಆತ ಅಷ್ಟೂ ಟ್ಯಾಟೂಗಳನ್ನು ಒಮ್ಮೆಗೇ ಹಾಕಿಸಿಕೊಂಡಿಲ್ಲ. 33 ವರ್ಷದ ಅತ 16ನೇ ವಯಸ್ಸಿನಲ್ಲಿ ಮೊದಲ ಹಚ್ಚೆ ಹಾಕಿಸಿಕೊಂಡಿದ್ದಾನೆ.

ಅದಾದ ಮೇಲೆ ಆಗಾಗ ಹಚ್ಚೆ ಹಾಕಿಸಿಕೊಳ್ಳುತ್ತಲೇ ಬಂದ ಅವನ ಮೈಮೇಲೆ ಸದ್ಯ 600 ಟ್ಯಾಟೂಗಳಿವೆ. ಅಷ್ಟಾದರೂ ಆತನ ಹಚ್ಚೆಯ ಹುಚ್ಚು ಕಡಿಮೆ ಆಗಿಲ್ಲ. ಮುಂದಿನ ವಾರ ಮತ್ತೊಂದು ಟ್ಯಾಟೂ ಹಾಕಿಸಿಕೊಳ್ಳಲು ಸಜ್ಜಾಗಿದ್ದಾನಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...