alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟ್ಟೆ ಬಿರಿಯುವಂತೆ ತಿಂದವನು ಮಾಡಿದ್ದೇನು ಅಂತ ಕೇಳಿದ್ರೆ ಬೆಚ್ಚಿ ಬೀಳ್ತಿರಿ

albino-python-genericಸಾಮಾನ್ಯವಾಗಿ ರೆಸ್ಟೋರೆಂಟ್ ಗೆ ಊಟಕ್ಕೆಂದು ಹೋದ ವೇಳೆ ಸಪ್ಲೆಯರ್ ಸಮರ್ಪಕ ಸೇವೆ ನೀಡಿದರೆ ಖುಷಿಯಾಗಿ ಟಿಪ್ಸ್ ನೀಡುವುದು ವಾಡಿಕೆ. ಆಹಾರ ಸರಿಯಿಲ್ಲದ ಸಂದರ್ಭದಲ್ಲಿ ವಾಗ್ವಾದಕ್ಕೆ ನಿಲ್ಲುವುದೂ ಉಂಟು. ಆದರೆ ಇಲ್ಲೊಬ್ಬ ಹೊಟ್ಟೆ ಬಿರಿಯುವಂತೆ ತಿಂದವನು ನಂತರ ಮಾಡಿದ್ದೇನು ಅಂತ ಕೇಳಿದ್ರೆ ಬೆಚ್ಚಿ ಬೀಳ್ತಿರಿ.

ಟೊಕಿಯೋದ ಪ್ರಖ್ಯಾತ ಶುಶಿ ರೆಸ್ಟೋರೆಂಟ್ ಶಾಖೆ, ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿದ್ದು, ಇಲ್ಲಿಗೆ 40 ವರ್ಷದ ಹಿಟೋಶಿ ಮೊಟೋಶಿ ಎಂಬಾತ ಆಗಮಿಸಿದ್ದಾನೆ. ಈತ ಹೊಟ್ಟೆ ಬಿರಿಯುವಂತೆ ತಿಂದಿದ್ದು, ಬಿಲ್ ಬರೋಬ್ಬರಿ 200 ಡಾಲರ್ ಗಳಾಗಿದೆ. ಇದೇ ಸಂದರ್ಭದಲ್ಲಿ ಹಿಟೋಶಿ ಸಣ್ಣ ಹೆಬ್ಬಾವಿನ ಮರಿಯೊಂದನ್ನು ತನ್ನೊಂದಿಗೆ ಇಟ್ಟುಕೊಂಡಿರುವುದು ರೆಸ್ಟೋರೆಂಟ್ ನವರ ಕಣ್ಣಿಗೆ ಬಿದ್ದಿದೆ. ಇದಕ್ಕೆ ಅವರು ಆಕ್ಷೇಪಿಸಿದ್ದಾರೆ. ಮರು ಮಾತನಾಡದೆ ಹಿಟೋಶಿ ಅಲ್ಲಿಂದ ತೆರಳಿದ್ದಾನೆ.

ಆದರೆ ಕೆಲವೇ ಕ್ಷಣದಲ್ಲಿ ಮರಳಿ ಬಂದ ಆತ, ತನ್ನೊಂದಿಗೆ ಈ ಬಾರಿ ತಂದಿದ್ದ ಬರೋಬ್ಬರಿ 13 ಅಡಿ ಉದ್ದದ ಹೆಬ್ಬಾವನ್ನು ರೆಸ್ಟೋರೆಂಟ್ ನಲ್ಲಿ ಬಿಟ್ಟಿದ್ದಾನೆ. ಇದನ್ನು ಕಂಡು ಅಲ್ಲಿದ್ದವರು ಎದ್ದೆವೋ ಬಿದ್ದೆವೋ ಎಂದು ಅಲ್ಲಿಂದ ಓಡಿದ್ದಾರೆ. ಕಡೆಗೆ ಪೊಲೀಸರನ್ನು ಕರೆಸಲಾಗಿದ್ದು, ಕ್ಯಾಶಿಯರ್ ಟೇಬಲ್ ಹಿಂದೆ ಅಡಗಿಕೊಂಡಿದ್ದ ಹೆಬ್ಬಾವನ್ನು ಹಿಡಿಯಲಾಗಿದೆ. ಇದೀಗ ಹಿಟೋಶಿಯನ್ನು ಪೊಲೀಸರು ಬಂಧಿಸಿದ್ದು, ಜಾಮೀನಿಗಾಗಿ ಆತ 50 ಸಾವಿರ ಡಾಲರ್ ತೆರಬೇಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...