alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರದ್ದೋ ಮನೆ ಮುಂದೆ ಕಾರು ನಿಲ್ಲಿಸಿದವರಿಗೆ ಬುದ್ಧಿ ಕಲಿಸಿದ್ದು ಹೀಗೆ….

ಇಂಗ್ಲೆಂಡ್ ನಲ್ಲೂ ಪಾರ್ಕಿಂಗ್ ಸಮಸ್ಯೆ ಇದೆ. ಲಿವರ್ ಪೂಲ್ ನಿವಾಸಿಯಾಗಿರೋ ನೀಲ್ ಜುಂಗ್ಲಾಸ್ ಎಂಬಾತನ ಮನೆ ಮುಂದೆ ನಿತ್ಯವೂ ಕಾರೊಂದು ನಿಂತಿರ್ತಾ ಇತ್ತು. ಆ ಕಾರಿನಲ್ಲಿ ಬರ್ತಾ ಇದ್ದ ಓರ್ವ ಮಹಿಳೆ ಹಾಗೂ ಪುರುಷ ಅಲ್ಲಿ ಕಾರು ನಿಲ್ಲಿಸಿ, ತಾವಿಬ್ಬರೂ ಟ್ಯಾಕ್ಸಿ ಏರಿ ಹೊರಟು ಹೋಗುತ್ತಿದ್ರು.

ಸಿಲ್ವರ್ ಕಲರ್ ನ ಸ್ಕೋಡಾ ಕಾರಿನ ಮಾಲೀಕರಿಗೆ ಪಾರ್ಕಿಂಗ್ ಸಮಸ್ಯೆ ಇದೆ. ಫ್ರೀ ಪಾರ್ಕಿಂಗ್ ಸಿಕ್ಕಿದೆ ಅಂತಾ ತನ್ನ ಮನೆ ಮುಂದೆ ನಿಲ್ಲಿಸುತ್ತಿದ್ದಾರೆ ಅನ್ನೋದು ನೀಲ್ ಗೆ ಅರ್ಥವಾಗಿತ್ತು. ಅಪರಿಚಿತರ ಕಾರಿನಿಂದಾಗಿ ನೀಲ್ ಗೆ ತನ್ನ ಕಾರನ್ನೇ ನಿಲ್ಲಿಸಲು ಜಾಗವಿಲ್ಲದಂತಾಗಿತ್ತು.

ಕೂಡಲೇ ಈ ಬಗ್ಗೆ ನೀಲ್ ಪೊಲೀಸರಿಗೆ ದೂರು ನೀಡಿದ್ದ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು ಕಾರನ್ನು ಅಕ್ರಮವಾಗಿ ಪಾರ್ಕ್ ಮಾಡಿಲ್ಲ, ಹಾಗಾಗಿ ನಾವೇನೂ ಮಾಡಲು ಸಾಧ್ಯವಿಲ್ಲ ಎಂದುಬಿಟ್ರು. ಕಾರ್ ಮಾಲೀಕರಿಗೆ ಹೇಗೆ ಬುದ್ಧಿ ಕಲಿಸೋದು ಅನ್ನೋ ಯೋಚನೆಯಲ್ಲಿದ್ದ ನೀಲ್ ಗೆ ಐಡಿಯಾ ಒಂದು ಹೊಳೆದಿತ್ತು.

ಅಂಗಡಿಯಿಂದ ದೊಡ್ಡದಾದ ಪ್ಲಾಸ್ಟಿಕ್ ತಂದು ಕಾರಿಗೆ ಪೂರ್ತಿಯಾಗಿ ಸುತ್ತಿಬಿಟ್ಟ. ಈ ಮಾರ್ಗದಲ್ಲಿ ಬರುತ್ತಿದ್ದವರೆಲ್ಲ ಕಾರನ್ನೇ ಅಚ್ಚರಿಯಿಂದ ನೋಡುತ್ತಿದ್ರು. ಫೋಟೋ ತೆಗೆದುಕೊಂಡು ಮುಂದೆ ಸಾಗುತ್ತಿದ್ರು. ಕಾರಿನ ವಿಡಿಯೋ ಮಾಡಿ ನೀಲ್ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...