alex Certify
ಕನ್ನಡ ದುನಿಯಾ       Mobile App
       

Kannada Duniya

ನವಾಜ್ ಶರೀಫ್ ಪತ್ನಿ ರೂಮಿಗೆ ನುಗ್ಗಿದ ಅಪರಿಚಿತ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪತ್ನಿ ಕುಲ್ಸೋಮ್ ನವಾಜ್ ರೂಮಿಗೆ ನುಗ್ಗಲು ಯತ್ನ ನಡೆಸುತ್ತಿದ್ದ ಅಪರಿಚಿತನನ್ನು ಬ್ರಿಟನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಂಡನ್ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಕುಲ್ಸೋಮ್ ನವಾಜ್ ರೂಮಿಗೆ ನುಗ್ಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

ನವಾಜ್ ಶರೀಫ್ ಪತ್ನಿ ಕುಲ್ಸೋಮ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅನೇಕ ಶಸ್ತ್ರಚಿಕಿತ್ಸೆಗಳು ನಡೆದಿವೆ. ಕೆಲ ದಿನಗಳ ಹಿಂದಷ್ಟೇ ಗಂಟಲು ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆದಿತ್ತು. ಚಿಕಿತ್ಸೆ ನಂತ್ರ ಮನೆಗೆ ಬಂದಿದ್ದ ಅವ್ರ ಆರೋಗ್ಯದಲ್ಲಿ ಬುಧವಾರ ಏರುಪೇರು ಕಾಣಿಸಿಕೊಂಡಿತ್ತು. ಹಾಗಾಗಿ ಅವ್ರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿರುವಾಗಲೇ ಗುರುವಾರ ಕುಲ್ಸೋಮ್ ರಿಗೆ ಹೃದಯಾಘಾತವಾಗಿದೆಯಂತೆ. ಪ್ರಜ್ಞೆ ಇಲ್ಲವೆಂದು ಮೂಲಗಳು ಹೇಳಿವೆ. ಸದ್ಯ ಅವ್ರನ್ನು ಐಸಿಯುವಿನಲ್ಲಿರಿಸಲಾಗಿದೆ. ನವಾಜ್ ಹಾಗೂ ಅವ್ರ ಮಗಳು ಕುಲ್ಸೋಮ್ ಭೇಟಿಗೆ ಗುರುವಾರ ಲಂಡನ್ ಗೆ ಬಂದಿದ್ದಾರೆ. ನವಾಜ್ ವಿರುದ್ಧ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಅವ್ರು ಪದೇ ಪದೇ ಲಂಡನ್ ಗೆ ಹೋಗಲು ಸಾಧ್ಯವಾಗ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...