alex Certify
ಕನ್ನಡ ದುನಿಯಾ       Mobile App
       

Kannada Duniya

ಭೂತದ ಮೆಣಸು ತಿಂದು ದಾಖಲೆ ಮಾಡಿದ ಯುವಕ

chilli

‘ಭೂತ್ ಜೊಲೊಕಿಯಾ’ ಅಥವಾ ‘ಘೋಸ್ಟ್ ಚಿಲ್ಲಿ’ ಇದು ವಿಶ್ವದಲ್ಲೇ ಅತ್ಯಂತ ಖಾರವಾದ ಮೆಣಸಿನಕಾಯಿ. ಈ ಮೆಣಸನ್ನು ಬಾಯಲ್ಲಿಟ್ರೆ ಸಾಕು ನಿಮ್ಮ ಮೈಪೂರ್ತಿ ಬೆಂಕಿಯಂತಾಗುತ್ತದೆ. ಮೂಗು ಬಾಯಿಯಿಂದ ಹೊಗೆ ಬರುತ್ತೆ. ಅಷ್ಟು ಖಾರ ಈ ಮೆಣಸು.

ಭೂತ್ ಜೊಲೊಕಿಯಾ ಮೆಣಸು ತಿನ್ನೋದನ್ನು ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಆದ್ರೆ ಲಾಸ್ ಏಂಜಲೀಸ್ ನಲ್ಲೊಬ್ಬ ಸಾಹಸಿ ಈ ಮೆಣಸನ್ನು ತಿಂದಿದ್ದಾನೆ. ಕೆವಿನ್ ಸ್ಟಾರ್ಲೆ ಎಂಬಾತ ಕೇವಲ ಒಂದೋ ಎರಡೋ ಮೆಣಸು ತಿಂದಿಲ್ಲ. 121.90 ಗ್ರಾಂನಷ್ಟು ಮೆಣಸನ್ನು ತಿಂದು ಹಾಕಿದ್ದಾನೆ.

ಕೇವಲ 2 ನಿಮಿಷಗಳಲ್ಲಿ ಇಷ್ಟು ಪ್ರಮಾಣದ ಭೂತ್ ಜೋಲೊಕಿಯಾ ಮೆಣಸನ್ನು ಕೆವಿನ್ ತಿಂದಿರೋದು ಹೊಸ ಗಿನ್ನಿಸ್ ದಾಖಲೆ. ಇವನ ಸಾಹಸ ನೋಡಿ ಜನರಂತೂ ಬೆಕ್ಕಸ ಬೆರಗಾಗಿದ್ದಾರೆ. ಆದ್ರೆ ಮೆಣಸನ್ನು ತಿಂದಾದ್ಮೇಲೆ ಕೆವಿನ್ ರಿಯಾಕ್ಷನ್ ನೋಡಿ ಅಯ್ಯೋ ಪಾಪ ಯಾಕ್ಬೇಕಿತ್ತು ಇಂಥಾ ರಿಸ್ಕ್ ಅಂತಾ ಅಲವತ್ತುಕೊಳ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...