alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ಯಾಸ್ ಸ್ಟೇಶನ್ ನಲ್ಲೇ ಬೈಕ್ ಗೆ ಬೆಂಕಿ ಹಚ್ಚಿದ ಭೂಪ…ಮುಂದೇನಾಯ್ತು?

fire-at-gas-station_650x400_71495863263

ಚೀನಾದ ಗ್ಯಾಸ್ ಸ್ಟೇಶನ್ ಒಂದರಲ್ಲಿ ಬೈಕ್ ಸವಾರನೊಬ್ಬ ಉದ್ದೇಶಪೂರ್ವಕವಾಗಿಯೇ ಬೈಕ್ ಗೆ ಬೆಂಕಿ ಹಚ್ಚಿದ್ದ. ಈ ಬೆಂಕಿಯನ್ನು ಅತ್ಯಂತ ಚಾಣಾಕ್ಷತೆ ಮತ್ತು ಧೈರ್ಯದಿಂದ ನಂದಿಸಿದ ಸಿಬ್ಬಂದಿ 6 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. ಮೇ 4ರಂದು ಬೆಳಗ್ಗೆ 9.40ರ ವೇಳೆ ವ್ಯಕ್ತಿಯೊಬ್ಬ ಬೈಕ್ ಗೆ ಪೆಟ್ರೋಲ್ ತುಂಬಿಸಿಕೊಂಡಿದ್ದ.

ಮರುಕ್ಷಣವೇ ಬೈಕ್ ನ ಪೆಟ್ರೋಲ್ ಟ್ಯಾಂಕ್ ಗೆ ಬೆಂಕಿ ಹಚ್ಚಿದ್ದಾನೆ. ಬೈಕ್ ಭಗಭಗನೆ ಹೊತ್ತಿ ಉರಿಯಲಾರಂಭಿಸಿತ್ತು. ಬೆಂಕಿ ಇನ್ನೂ ಪಸರಿಸಲಿ ಅನ್ನೋ ಉದ್ದೇಶದಿಂದ ಆತ ಬೈಕನ್ನು ಕೆಳಕ್ಕೆ ಬೀಳಿಸಿದ್ದ. ಸ್ವಲ್ಪ ಯಾಮಾರಿದ್ರೂ ಇಡೀ ಗ್ಯಾಸ್ ಸ್ಟೇಶನ್ ಭಸ್ಮವಾಗಿ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.

ಆದ್ರೆ ಸಿಬ್ಬಂದಿಯ ಚಾಣಾಕ್ಷತೆಯಿಂದ ಭಾರೀ ಅನಾಹುತ ತಪ್ಪಿದೆ. ಬೆಂಕಿ ಆವರಿಸ್ತಿದ್ದಂತೆ ಕೂಡಲೇ ಅಗ್ನಿಶಾಮಕ ಸಾಧನ ತೆಗೆದುಕೊಂಡ ಸಿಬ್ಬಂದಿ, ಬೆಂಕಿ ನಂದಿಸಲು ಶುರು ಮಾಡಿದ್ದ. ಅಷ್ಟರಲ್ಲಿ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಬೈಕ್ ಸವಾರನನ್ನು ಕೂಡ ಇತರ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬೆಂಕಿ ಸ್ವಲ್ಪ ತಹಬದಿಗೆ ಬರ್ತಿದ್ದಂತೆ ಸಿಬ್ಬಂದಿ ಬೈಕನ್ನು ಹೊರಕ್ಕೆ ತಂದುಹಾಕಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...