alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರ್ಟ್ಸ್ ಬೇಡ ಎಂದಿದ್ದಕ್ಕೆ ಅಮ್ಮನ ಡ್ರೆಸ್ ತೊಟ್ಟು ಬಂದ ಯುವಕ

joe

ಲಂಡನ್ ನಿವಾಸಿಗಳು ಸೆಖೆ ತಡೆಯಲಾಗದೆ ಒದ್ದಾಡ್ತಿದ್ದಾರೆ. ಸುಂದರ ಪಾರ್ಕ್ ಅಥವಾ ಸಮುದ್ರ ತೀರದಲ್ಲಿದ್ರೆ ಬಿಸಿಗಾಳಿ ಕೂಡ ಹಿತ ಎನಿಸಬಹುದು. ಆದ್ರೆ ಬಿರುಬಿಸಿಲಲ್ಲಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದು ನಿಜಕ್ಕೂ ಕಷ್ಟವೇ.

ಅದಕ್ಕಾಗಿಯೇ ಜೋ ಬಾರ್ಜ್ ಎಂಬಾತ ಕಚೇರಿಗೆ ಶಾರ್ಟ್ಸ್ ಧರಿಸಿ ಬಂದಿದ್ದ. ಸೂಟು ಬೂಟಿನ ಸಹವಾಸವೇ ಬೇಡ ಅಂತಾ ತೆಗೆದಿರಿಸಿದ್ದ. ಆದ್ರೆ ಕಚೇರಿಯ ನಿಯಮ ಉಲ್ಲಂಘಿಸಿ ಚಡ್ಡಿ ಧರಿಸಿ ಬಂದಿದ್ರಿಂದ ಆತನನ್ನು ಮನೆಗೆ ಕಳಿಸಲಾಗಿತ್ತು.

shorts

ಜೋ ಅಷ್ಟಕ್ಕೇ ಸುಮ್ಮನಾಗಿಲ್ಲ. ಮಹಿಳೆಯರು ತುಂಡು ಲಂಗ, ಶಾರ್ಟ್ ಡ್ರೆಸ್ ಧರಿಸಿ ಬರಬಹುದು. ಆದ್ರೆ ಪುರುಷರಿಗೆ ಯಾಕಿಂಥ ನಿಯಮ ಅಂತಾ ತಲೆಕೆಡಿಸಿಕೊಂಡಿದ್ದಾನೆ. ಮನೆಗೆ ಹೋದವನೇ ತಾಯಿಯ ಶಾರ್ಟ್ ಡ್ರೆಸ್ ಹಾಕಿಕೊಂಡು ಒಂದೆರಡು ಸೆಲ್ಫಿ ಕ್ಲಿಕ್ಕಿಸಿ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ.

joe-1

ನಂತರ ತಾಯಿಯ ಡ್ರೆಸ್ ಧರಿಸಿ ಮತ್ತೆ ಕಚೇರಿಗೆ ತೆರೆಳಿದ್ದಾನೆ. ಪುನಃ ತನ್ನನ್ನು ಮನೆಗೆ ಕಳಿಸೋದು ಗ್ಯಾರಂಟಿ ಅಂತಾನೇ ಅಂದುಕೊಂಡಿದ್ದ. ಆದ್ರೆ ಅವನ ಲೆಕ್ಕಾಚಾರ ಉಲ್ಟಾ ಆಗಿದೆ. ಸೆಖೆಯಿಂದ ಪಾರಾಗಲು ಪುರುಷರು 3/4th ಚಡ್ಡಿ ಹಾಕಿಕೊಂಡು ಕಚೇರಿಗೆ ಬರಬಹುದು ಅಂತಾ ಫರ್ಮಾನು ಹೊರಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...