alex Certify
ಕನ್ನಡ ದುನಿಯಾ       Mobile App
       

Kannada Duniya

3 ದಿನ ಚರಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದವನು ಮೊದಲು ಕೇಳಿದ್ದೇನು ಗೊತ್ತಾ?

ಲಂಡನ್ ನಲ್ಲಿ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ. ಆತನನ್ನು ರಕ್ಷಣೆ ಮಾಡಲಾಗಿದ್ದು, ಮೂರು ದಿನ ಅನ್ನ ಆಹಾರ ನೀರಿಲ್ಲದೇ ಇದ್ರೂ ಮೇಲೆ ಬಂದ ತಕ್ಷಣ ಸಿಗರೇಟ್ ಕೇಳಿದ್ದಾನೆ ಭೂಪ.

48 ವರ್ಷದ ಡೇವಿಡ್ ಮಿಲ್ಲರ್ ಎಂಬಾತ ಮೆಡಿಸಿನ್ ಖರೀದಿಸಲು ಬಂದಿದ್ದ. ಈ ವೇಳೆ ಕಾಲು ಜಾರಿ ಚರಂಡಿಗೆ ಬಿದ್ದುಬಿಟ್ಟಿದ್ದಾನೆ. ಗಟಾರದೊಳಗೆ ಪೂರ್ತಿ ಕತ್ತಲು, ಗಬ್ಬು ವಾಸನೆ, ಉಸಿರಾಡುವುದೇ ಕಷ್ಟ ಎನಿಸುತ್ತಿತ್ತು ಡೇವಿಡ್ ಗೆ. ತಾನು ಬದುಕೋದೇ ಅಸಾಧ್ಯ ಎಂದುಕೊಂಡಿದ್ದ.

ಗಟಾರದೊಳಗೆ ನಡೆದುಕೊಂಡೇ ಆತ ಸುಮಾರು 6 ಮೈಲು ದೂರ ಸಾಗಿದ್ದ. ಸತತ 72 ಗಂಟೆಗಳ ಕಾಲ ಚರಂಡಿಯ ಪೈಪ್ ನೊಳಗಿನಿಂದ ಹೊರಬರಲು ಕಸರತ್ತು ಮಾಡಿದ್ದಾನೆ. ಸಹಾಯಕ್ಕಾಗಿ ಒಂದೇ ಸಮನೆ ಕೂಗಿಕೊಳ್ಳುತ್ತಿದ್ದ, ಅಸಹಾಯಕತೆಯಿಂದ ಅಳುತ್ತಿದ್ದ.

ಬ್ರೆಂಟ್ ವುಡ್ ರೋಡ್ ಬಳಿ ಕೆಲಸಕ್ಕೆ ಅಂತ ಬಂದಿದ್ದ ಕಾರ್ಮಿಕರಿಗೆ ಡೇವಿಡ್ ಅಳುವ ಸದ್ದು ಕೇಳಿದೆ. ಕೂಡಲೇ ಅವರು ಡೇವಿಡ್ ನನ್ನು ಚರಂಡಿಯೊಳಗಿನಿಂದ ಹೊರಕ್ಕೆ ಕರೆತಂದಿದ್ದಾರೆ. ಡೇವಿಡ್ ನ ಕೈ ಮತ್ತು ಕಾಲುಗಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...