alex Certify
ಕನ್ನಡ ದುನಿಯಾ       Mobile App
       

Kannada Duniya

ಶೋಕಿಗಾಗಿ ಸಿಂಹದ ಮರಿ ಬಾಡಿಗೆಗೆ ಪಡೆದವನೀಗ ಪೊಲೀಸರ ಅತಿಥಿ

ಪ್ಯಾರಿಸ್ ನಲ್ಲಿ ಸಿಂಹದ ಮರಿಯನ್ನು ಬಾಡಿಗೆಗೆ ಪಡೆದು ಪೋಸ್ ಕೊಡ್ತಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. 24 ವರ್ಷದ ಯುವಕನೊಬ್ಬ ಶೋಕಿಗಾಗಿ ಸಿಂಹದ ಮರಿಯನ್ನು ಬಾಡಿಗೆಗೆ ಪಡೆದಿದ್ದ. ನಂತರ ಅದರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೇಸ್ಬುಕ್ ನಲ್ಲಿ ಹಾಕಿದ್ದಾನೆ.

ಈ ಸೆಲ್ಫಿಗಳನ್ನು ನೋಡಿದ ಪೊಲೀಸರಿಗೆ ಅನುಮಾನ ಬಂದಿತ್ತು. ಅವನ ಮನೆ ವಿಳಾಸ ಹುಡುಕಿಕೊಂಡು ಬಂದ ಪೊಲೀಸರು ಆತನನ್ನು ಬಂಧಿಸಿದ್ರು. ಆದ್ರೆ ಮನೆಯಲ್ಲಿ ಸಿಂಹದ ಮರಿ ಇರಲಿಲ್ಲ. ಮೊದಲೇ ಮಾಸ್ಟರ್ ಪ್ಲಾನ್ ಮಾಡಿದ್ದ ಯುವಕ ಸಿಂಹದ ಮರಿಯನ್ನು ಬೇರೊಂದು ಅಪಾರ್ಟ್ ಮೆಂಟ್ ನಲ್ಲಿ ಇಟ್ಟಿದ್ದ.

ಅಲ್ಲಿ ಮರಿ ಸಿಂಹ ಒಂಟಿಯಾಗಿತ್ತು. ಕೊನೆಗೆ ಅವನಿಂದ್ಲೇ ವಿಳಾಸ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಸಿಂಹದ ಮರಿಯನ್ನು ರಕ್ಷಣೆ ಮಾಡಿದ್ದಾರೆ. ಪ್ರಾಣಿ ರಕ್ಷಣಾ ಘಟಕಕ್ಕೆ ಕಳಿಸಿಕೊಟ್ಟಿದ್ದಾರೆ. ಕಾಡು ಪ್ರಾಣಿಯನ್ನು ಅಕ್ರಮವಾಗಿ ಇಟ್ಟುಕೊಂಡ ಆರೋಪದ ಮೇಲೆ ಯುವಕನನ್ನು ಕಸ್ಟಡಿಗೆ ಪಡೆದಿದ್ದಾರೆ.

😺 Gros chat très méchant 🦁Ce soir à 18h30, les spécialistes animaliers des pompiers de Paris interviennent pour…

Posted by Pompiers de Paris on Tuesday, October 10, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...