alex Certify
ಕನ್ನಡ ದುನಿಯಾ       Mobile App
       

Kannada Duniya

ಟರ್ಕಿ ಅಧ್ಯಕ್ಷರಿಗೇ ಚಹಾ ಕೊಡಲು ಒಲ್ಲೆ ಎಂದ….

turkey

ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಅವರಿಗೆ ಚಹಾ ಕೊಡಲು ಕ್ಯಾಫಿಟೇರಿಯಾದ ಮ್ಯಾನೇಜರ್ ಒಬ್ಬ ನಿರಾಕರಿಸಿದ್ದಾನೆ. ಅಧ್ಯಕ್ಷರಿಗೆ ಅವಮಾನ ಮಾಡಿದ ಆರೋಪದ ಮೇಲೆ ಟರ್ಕಿ ಪೊಲೀಸರು ಕೆಫೆ ಮ್ಯಾನೇಜರ್ ನನ್ನು ಬಂಧಿಸಿದ್ದಾರೆ.

ಸೆನೊಲ್ ಬುರನ್ ಎಂಬಾತ ಇಸ್ತಾಂಬುಲ್ ನಲ್ಲಿ ಕ್ಯಾಫಿಟೇರಿಯಾ ಒಂದನ್ನು ನಡೆಸ್ತಿದ್ದಾನೆ. ಸರ್ಕಾರದ ಧೋರಣೆಗಳನ್ನು ವಿರೋಧಿಸುವ ಕಮ್ ಹುರಿಯೆತ್ ಪತ್ರಿಕೆಯ ಕಚೇರಿ ಕೂಡ ಇಸ್ತಾಂಬುಲ್ ನಲ್ಲೇ ಇದೆ.

ಈ ಪತ್ರಿಕೆ ಸಹ ಸರ್ಕಾರದ ನಡೆಗಳನ್ನು ಟೀಕಿಸುತ್ತಲೇ ಬಂದಿದೆ. ಇದು ಕೂಡ ಸೆನೊಲ್ ಬುರನ್ ಅವರಿಗೆ ಸೇರಿದ್ದು. ಈ ಹಿನ್ನೆಲೆಯಲ್ಲಿ ಬುರನ್ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ರಾಷ್ಟ್ರದ ಅಧ್ಯಕ್ಷರಿಗೆ ಅವಮಾನ ಮಾಡುವುದು ಟರ್ಕಿಯಲ್ಲಿ ಶಿಕ್ಷಾರ್ಹ ಅಪರಾಧ. ಇದಕ್ಕೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮಾಜಿ ಮಿಸ್ ಟರ್ಕಿ ಸ್ಪರ್ಧೆಯಲ್ಲಿ ವಿಜೇತ ಸುಂದರಿ ಸೇರಿದಂತೆ 1800ಕ್ಕೂ ಹೆಚ್ಚು ಮಂದಿ ವಿರುದ್ಧ ಇಂತಹ ಪ್ರಕರಣಗಳು ದಾಖಲಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...