alex Certify
ಕನ್ನಡ ದುನಿಯಾ       Mobile App
       

Kannada Duniya

7 ವರ್ಷದ ಬಾಲಕಿ ಮುಂದೆ ಅಪ್ರಾಪ್ತೆ ಮೇಲೆರಗಿದ

rape_1500977499_618x347-1

ಅಮೆರಿಕಾರದಲ್ಲಿ ಮದ್ಯದ ನಶೆಯಲ್ಲಿದ್ದ ಯುವಕನೊಬ್ಬ 7 ವರ್ಷದ ಬಾಲಕಿ ಮುಂದೆಯೇ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಪಾರ್ಟಿಗೆ ಬಂದವನ ದುಷ್ಕೃತ್ಯ ನೋಡಿದ 7 ವರ್ಷದ ಬಾಲಕಿ ಪಕ್ಕದ ಮನೆಯವರಿಗೆ ವಿಷ್ಯ ಮುಟ್ಟಿಸಿದ್ದಾಳೆ. ನೆರೆಯವರ ನೆರವಿನಿಂದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಮೆರಿಕಾದ ಅಲಬಾಮಾದಲ್ಲಿ ಘಟನೆ ನಡೆದಿದೆ. ಪೀಡಿತ 14 ವರ್ಷದ ಅಪ್ರಾಪ್ತ ಬಾಲಕಿ  ತನ್ನ 7 ವರ್ಷದ ತಂಗಿ ಹಾಗೂ ಚಿಕ್ಕಮ್ಮನ ಜೊತೆ ವಾಸವಾಗಿದ್ದಳು. ಹಿಂದಿನ ವಾರ ಚಿಕ್ಕಮ್ಮ ತನ್ನ ಸ್ನೇಹಿತರಾದ ಅಮಂಡಾ ಬೈರ್ಡ್ ಹಾಗೂ ಆರೋಪಿ ಟೋನಿ ನಾಥನ್ ನನ್ನು ಮನೆಗೆ ಕರೆದಿದ್ದಾಳೆ. ಎಲ್ಲರೂ ಪಾರ್ಟಿ ಮಾಡಿದ್ದಾರೆ.

ಪಾರ್ಟಿ ವೇಳೆ ಪೀಡಿತೆಯ ಚಿಕ್ಕಮ್ಮ ಹಾಗೂ ಇಬ್ಬರು ಸ್ನೇಹಿತರು ಮದ್ಯದ ಜೊತೆಗೆ ಡ್ರಗ್ಸ್ ತೆಗೆದುಕೊಂಡಿದ್ದಾರೆ. ಇದ್ರಿಂದಾಗಿ ಇಬ್ಬರೂ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಸಮಯವನ್ನು ಬಳಸಿಕೊಂಡ ಟೋನಿ 14 ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿದ್ದಾನೆ. ಅಕ್ಕನ ಸ್ಥಿತಿ ನೋಡಿದ 7 ವರ್ಷದ ಬಾಲಕಿ ಪಕ್ಕದ ಮನೆಯವರ ನೆರವು ಪಡೆದಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಿಕ್ಕಮ್ಮ ಹಾಗೂ ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...