alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಲ್ ಫ್ರೆಂಡ್ ನ್ನು ಮಾರಾಟಕ್ಕಿಟ್ಟ ಭೂಪ…!

ಆನ್ ಲೈನ್ ಮಾರುಕಟ್ಟೆ ಬಂದ ಮೇಲೆ ಜನ ಎಲ್ಲವನ್ನು ಮಾರಾಟಕ್ಕೆ ಅಥವಾ ಖರೀದಿಗೆ ಆನ್ ಲೈನ್ ಶಾಪಿಂಗ್ ಬಳಸುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಮಹಾಶಯ ಪ್ರೇಯಸಿಯೊಂದಿಗೆ ಜಗಳವಾಡಿದ್ದನ್ನೇ ನೆಪವಾಗಿಟ್ಟುಕೊಂಡು, ಇಬೇನಲ್ಲಿ ಮಾರಾಟಕ್ಕೆ ಇಟ್ಟಿದ್ದಾನೆ.

ವಿಚಿತ್ರ ಎನಿಸಿದರೂ ಇದು ನಿಜ. ಡೇಲ್ ಲೀಕ್ಸ್ ಎಂಬಾತ ತನ್ನ ಗರ್ಲ್ ಫ್ರೆಂಡ್ ಕೆಲ್ಲಿ ಗ್ರೀವ್ಸ್ ಳನ್ನು ಮಾರಾಟಕ್ಕೆ ಇಟ್ಟಿದ್ದು, ಇದನ್ನು 24 ಗಂಟೆಯಲ್ಲಿ ಸುಮಾರು 81 ಸಾವಿರ ಮಂದಿ ನೋಡಿ, 71 ಸಾವಿರ ಪೌಂಡಿಗೆ ಹರಾಜು ಕೂಗಿದ್ದಾರೆ.

ಇಬೇನಲ್ಲಿ ಗೆಳತಿಯ ಫೋಟೋ ಹಾಕಿ, ಬಳಸಿದ ಕಾರೆಂದು ಬರೆದುಕೊಂಡಿರುವ ಡೇಲ್, ಅಂಗಡಿಯೊಂದರಲ್ಲಿ ಆಕೆ ಮಾಡಿದ್ದ ವರ್ತನೆಯಿಂದ ಬೇಸರಗೊಂಡು ಈ ರೀತಿ ಪ್ರತೀಕಾರ ತೀರಿಸಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಈ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯಿಸಿದ್ದು, ಕಾರಿನ ಸ್ಥಿತಿಗತಿ ಏನು? ಎಷ್ಟು ಜನ ಓಡಿಸಿದ್ದಾರೆ? ಟೆಸ್ಟ್ ಡ್ರೈವ್ ಗೆ ಅವಕಾಶವಿದೆಯೇ ಎಂದೆಲ್ಲ ಪ್ರಶ್ನಿಸಿದ್ದಾರೆ.

ಆದರೆ ಆನ್ ಲೈನ್ ನಲ್ಲಿ ಮನುಷ್ಯರ ಅಂಗಾಂಗ ಅಥವಾ ಮನುಷ್ಯನ ಮಾರಾಟ ನಿಷೇಧವಾಗಿರುವುದರಿಂದ, ಪೋಸ್ಟ್ ಮಾಡಿದ ಒಂದು ದಿನದ ಬಳಿಕ ಇಬೇ ಸಂಸ್ಥೆ ಈ ಪೋಸ್ಟ್ ನ್ನು ಡಿಲಿಟ್ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡೇಲ್, ಆರಂಭದಲ್ಲಿ ನಾನು ಮಾರಾಟಕ್ಕೆ ಇಟ್ಟಿದ್ದೇನೆ ಎಂದು ಹೇಳಿದಾಗ ಆಕೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಬಳಿಕ ಇದರ ಗಂಭೀರತೆಯನ್ನು ಅರಿತಳು ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...