alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗೆ ನೀಡಿದ್ದಾರೆ ಇಂತಹ ಶಿಕ್ಷೆ

yeman-ddf

ಸನಾ: ಯೆಮನ್ ನಲ್ಲಿ ಕಾಮುಕನೊಬ್ಬನನ್ನು ಬಹಿರಂಗವಾಗಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. 3 ವರ್ಷದ ಮಗುವಿನ ಮೇಲೆ ಕಾಮುಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಹಿನ್ನಲೆಯಲ್ಲಿ ಇಂತಹ ಕ್ರೂರ ಶಿಕ್ಷೆ ನೀಡಲಾಗಿದೆ.

ಮಹಮ್ಮದ್ ಅಲ್ ಮಗರ್ ಬಾಯ್(41) ಶಿಕ್ಷೆಗೆ ಒಳಗಾದವ. ಯೆಮನ್ ರಾಜಧಾನಿ ಸನಾದಲ್ಲಿ 2009 ರ ಬಳಿಕ ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಮಹಮ್ಮದ್ ಅಲ್ ಮಗರ್ ಬಾಯ್ ಗೆ ಕೋರ್ಟ್ ಮರಣದಂಡನೆ ಶಿಕ್ಷೆ ನೀಡಿತ್ತು.

ಆತನನ್ನು ಬಿಗಿ ಭದ್ರತೆಯಲ್ಲಿ ಸನಾದ ಪ್ರಮುಖ ಸ್ಥಳಕ್ಕೆ ಕರೆತಂದ ಭದ್ರತಾ ಸಿಬ್ಬಂದಿ ಕೆಳಗೆ ಮಲಗಿಸಿ ಗುಂಡು ಹಾರಿಸಿದ್ದಾರೆ. ಆತನ ಮೇಲೆ ಮೃತ ಮಗುವಿನ ಕಡೆಯವರು ದಾಳಿ ಮಾಡಬಹುದಾದ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...