alex Certify
ಕನ್ನಡ ದುನಿಯಾ       Mobile App
       

Kannada Duniya

ಕೈ ತಪ್ಪಿದ್ದ ಪ್ರೀತಿಯನ್ನು ಈತ ಮತ್ತೆ ಪಡೆದಿದ್ದೆಲ್ಲಿ ಗೊತ್ತಾ..?

man-proposes-to-long-lost-crush-on-school-bus-where-they-metಹಲವು ಮಂದಿ ತಾವು ಪ್ರೀತಿಸುತ್ತಿದ್ದರೂ ಅದನ್ನು ಪ್ರೀತಿಸಿದವರ ಮುಂದೆ ಹೇಳಿಕೊಳ್ಳಲಾರದೆ ಚಡಪಡಿಸುತ್ತಿರುತ್ತಾರೆ. ಈ ಕಾರಣಕ್ಕಾಗಿಯೇ ಪ್ರೀತಿ ಕೈ ತಪ್ಪಿದಾಗ ಪರಿತಪಿಸುತ್ತಾರೆ. ಇಲ್ಲೊಬ್ಬ ತಾನು ಬಾಲ್ಯದಿಂದಲೂ ಪ್ರೀತಿಸುತ್ತಿದ್ದಾಕೆಗೆ ತನ್ನ ಮನದಿಂಗಿತವನ್ನು ತಿಳಿಸಲು ಬರೋಬ್ಬರಿ 30 ವರ್ಷಗಳ ಕಾಲ ತೆಗೆದುಕೊಂಡಿದ್ದಾನೆ. ಕೊನೆಗೂ ಧೈರ್ಯ ಮಾಡಿ ವಿಭಿನ್ನವಾಗಿ ಆಕೆಗೆ ಪ್ರೇಮ ನಿವೇದನೆ ಮಾಡಿದ್ದು, ಆಕೆಯೂ ‘ಎಸ್’ ಎಂದಿದ್ದಾಳೆ.

ಅಮೆರಿಕಾದ ಅಲಾಬಾಮ ಸ್ಟೇಟ್ ನ ಎರಿಕ್ ಕಾರ್ಡ್ ವೆಲ್ ಎಂಬಾತ 30 ವರ್ಷಗಳ ಹಿಂದೆ ಟ್ರೇಸಿ ಎಂಬಾಕೆಯ ಮೇಲೆ ಆಕರ್ಷಿತನಾಗಿದ್ದ. ಶಾಲಾ ಬಸ್ ನಲ್ಲಿ ಇಬ್ಬರೂ ಜೊತೆಯಾಗಿ ಹೋಗುತ್ತಿದ್ದರೂ ಎರಿಕ್ ಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗಿರಲಿಲ್ಲ. ಆಕೆ ಈತನಿಗಿಂತ ಕೆಲ ವರ್ಷ ಹಿರಿಯಳಾಗಿದ್ದೂ ಇದಕ್ಕೆ ಕಾರಣವಾಗಿತ್ತು. ಈ ಮಧ್ಯೆ ಇಬ್ಬರೂ ತಮ್ಮ ವ್ಯಾಸಂಗ ಮುಗಿಸಿ ದೂರವಾಗಿದ್ದು, ಬೇರೆಯವರ ಜೊತೆ ವಿವಾಹವಾಗಿ ಮಕ್ಕಳನ್ನೂ ಹೊಂದಿದ್ದರು.

ಆದರೆ ಇಬ್ಬರ ವಿವಾಹವೂ ಹಲವರು ಕಾರಣಗಳಿಂದಾಗಿ ಮುರಿದು ಬಿದ್ದಿತ್ತು. ಮತ್ತೊಂದು ಮದುವೆಯ ಗೋಜಿಗೆ ಹೋಗದೆ ಇಬ್ಬರೂ ತಮ್ಮ ತಮ್ಮ ಮಕ್ಕಳ ಪಾಲನೆ ಪೋಷಣೆಯಲ್ಲೇ ದಿನದೂಡುತ್ತಿದ್ದರು. ಇತ್ತೀಚೆಗೆ ಎರಿಕ್, ಟ್ರೇಸಿಯನ್ನು ಭೇಟಿಯಾಗಿದ್ದಾನೆ. ಈಗಲಾದರೂ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕೆಂದುಕೊಂಡ ಎರಿಕ್ ಇದಕ್ಕಾಗಿ ತನಗೆ ಶಾಲಾ ದಿನಗಳಲ್ಲಿ ಆಕೆಯ ಮೇಲೆ ಆಕರ್ಷಣೆ ಉಂಟಾಗಿದ್ದ ಬಸ್ ಅನ್ನೇ ಆಯ್ದುಕೊಂಡಿದ್ದಾನೆ. ಅದೇ ಬಸ್ ಲಭ್ಯವಾಗದ ಕಾರಣ ಮತ್ತೊಂದು ಬಸ್ ಬಾಡಿಗೆಗೆ ಪಡೆದು ಅದಕ್ಕೆ ಶಾಲಾ ದಿನಗಳಲ್ಲಿ ಓಡಾಡುತ್ತಿದ್ದ ಬಸ್ ನಂಬರ್ ನ್ನು ಬರೆಸಿದ್ದಾನೆ. ಬಳಿಕ ಟ್ರೇಸಿಯನ್ನು ಕರೆಸಿಕೊಂಡು ಆಕೆಯ ಮುಂದೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಇದಕ್ಕೆ ಟ್ರೇಸಿಯೂ ‘ಎಸ್’ ಎಂದಿದ್ದು ಇದೇ ತಿಂಗಳಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೆ ಇಬ್ಬರ ಮಕ್ಕಳೂ ಹಾಗೂ ಕುಟುಂಬ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...