alex Certify
ಕನ್ನಡ ದುನಿಯಾ       Mobile App
       

Kannada Duniya

ಜಸ್ಟಿನ್ ಬೀಬರ್ ಹೆಸರಲ್ಲಿ ಯುವಕನ ನೀಚ ಕೃತ್ಯ

ಹಾಲಿವುಡ್ ಗಾಯಕ ಜಸ್ಟಿನ್ ಬೀಬರ್ ಅವ್ರನ್ನು ಹೋಲುವ ವ್ಯಕ್ತಿಯೊಬ್ಬ ಜೈಲುಪಾಲಾಗಿದ್ದಾನೆ. ಈತ ತಾನೇ ಜಸ್ಟಿನ್ ಬೀಬರ್ ಅಂತಾ ಪೋಸು ಕೊಟ್ಟು, ಇನ್ ಸ್ಟಾಗ್ರಾಮ್, ವಾಟ್ಸಾಪ್, ಫೇಸ್ಬುಕ್ ಮತ್ತು ಸ್ಕೈಪ್ ಮೂಲಕ ಶಾಲಾ ಬಾಲಕಿಯರ ನಗ್ನ ಫೋಟೋಗಳನ್ನು ತರಿಸಿಕೊಳ್ತಿದ್ದ.

30 ವರ್ಷದ ಯೋಹಾನ್ ರಾಮ್ಚೆಲಾವ್ನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಈತ 12-17 ವರ್ಷದೊಳಗಿನ ಬಾಲಕಿಯರನ್ನು ಸಂಪರ್ಕಿಸ್ತಾ ಇದ್ದ. ನಗ್ನ ಸೆಲ್ಫಿ ಕ್ಲಿಕ್ಕಿಸಿ ತನಗೆ ಕಳಿಸುವಂತೆ ಕೇಳುತ್ತಿದ್ದ. ನಂತರ ಆ ಫೋಟೋಗಳನ್ನು ಲೀಕ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ.

ಮಾರಿಷಸ್ ಮೂಲದ ಯೋಹಾನ್ ಈ ಹಿಂದೆ ಕೂಡ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆದ್ರೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಹಳೆ ವರಸೆಯನ್ನೇ ಮುಂದುವರಿಸಿದ್ದ. ಐಪಿ ಅಡ್ರೆಸ್ ಸಹಾಯದಿಂದ ಕಾಮುಕನನ್ನು ಪೊಲೀಸರು ಟ್ರೇಸ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...