alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರೂ ಊಹಿಸಲಾಗದ ಘಟನೆಗೆ ಸಾಕ್ಷಿಯಾಗಿದೆ ಈ ಫೋಟೋ

ಚೀನಾದ ಜೋಡಿಯೊಂದರ ಜೀವನದಲ್ಲಿ ಸಿನಿಮೀಯ ರೀತಿಯ ಘಟನೆ ನಡೆದಿದೆ. ಕೇವಲ ಸಿನಿಮಾಗಳಲ್ಲಿ ಮಾತ್ರ ಕಂಡು ಬರುವ ದೃಶ್ಯ ಈ ದಂಪತಿಗಳ ನಿಜ ಜೀವನದಲ್ಲಿ ಘಟಿಸಿದೆ. ಇದಕ್ಕೆ ಕಾರಣವಾಗಿರುವುದು ಒಂದು ಫೋಟೋ. ಈಗ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯೆ ಹಾಗೂ ಕ್ಸ್ಯು ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ತನ್ನ ಪತ್ನಿಯ ಹಳೆಯ ಫೋಟೋಗಳ ಆಲ್ಬಂ ವೀಕ್ಷಿಸುತ್ತಿದ್ದ ಪತಿಗೆ ಅಚ್ಚರಿಯೊಂದು ಕಾದಿತ್ತು. 2000 ರಲ್ಲಿ ಕ್ಸ್ಯು, ಕ್ವಿಂಗುಡಾ ನಗರಕ್ಕೆ ಪ್ರವಾಸಕ್ಕೆ ಹೋಗಿದ್ದ ವೇಳೆ ತೆಗೆಸಿಕೊಂಡಿದ್ದ ಫೋಟೋದಲ್ಲಿ ತಾನೂ ಸೆರೆಯಾಗಿರುವುದು ಯೆ ಗೆ ಕಂಡು ಬಂದಿತ್ತು.

ಆ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಅಪರಿಚಿತರಾಗಿದ್ದರು. ಅಷ್ಟೇ ಅಲ್ಲ ಅಂದು ಯೆ, ಅನಾರೋಗ್ಯಕ್ಕೊಳಗಾಗಿದ್ದ ತನ್ನ ತಾಯಿಯನ್ನು ಆಕೆಯ ಸಂಬಂಧಿಗಳ ಮನೆಗೆ ಬಿಡಲು ಕರೆದೊಯ್ದಿದ್ದು, ಬಳಿಕ ಈ ಪ್ರವಾಸಿ ಸ್ಥಳದ ಬಳಿ ಸುತ್ತಾಡಲು ಬಂದಿದ್ದ. ಪತ್ನಿಯ ಫೋಟೋದಲ್ಲಿ ತಾನು 11 ವರ್ಷಗಳ ಹಿಂದೆಯೇ ಸೆರೆಯಾಗಿರುವುದನ್ನು ಕಂಡು ಒಂದು ಕ್ಷಣ ಅಚ್ಚರಿಗೊಳಗಾದ ಪತಿ, ಬಳಿಕ ಚೀನಾದ ಸಾಮಾಜಿಕ ಜಾಲತಾಣ Weibo ದಲ್ಲಿ ಇದನ್ನು ಪೋಸ್ಟ್ ಮಾಡಿದ್ದಾನೆ. ಇದು ಈಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...