alex Certify
ಕನ್ನಡ ದುನಿಯಾ       Mobile App
       

Kannada Duniya

ಸೇತುವೆಯಿಂದ ಹಾರಲು ಹೊರಟಿದ್ದವನನ್ನು ರಕ್ಷಿಸಿದ್ದು ಲಾರಿಗಳು

ಮಿಚಿಗನ್ ನ ಡೆಟ್ರಾಯಿಟ್ ಎಂಬಲ್ಲಿ ನಡುರಾತ್ರಿ ಹೈಡ್ರಾಮಾ ಒಂದು ನಡೆದಿದೆ. ಸೇತುವೆ ಮೇಲೇರಿದ್ದ ವ್ಯಕ್ತಿಯೊಬ್ಬ ಅಲ್ಲಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಜ್ಜಾಗಿದ್ದ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಆ ಲೇನ್ ಅನ್ನೇ ಬ್ಲಾಕ್ ಮಾಡಿದ್ರು.

ಆತ್ಮಹತ್ಯೆ ಮಾಡಿಕೊಳ್ಳದಂತೆ ಆ ವ್ಯಕ್ತಿಯ ಮನವೊಲಿಸಲು ಆರಂಭಿಸಿದ್ರು. ಸೇತುವೆ ಕೆಳಗೆ ವಾಹನಗಳ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಯ್ತು. ಆದ್ರೆ ಆತ ಮಾತ್ರ ಜಪ್ಪಯ್ಯ ಅಂದ್ರೂ ಕೆಳಕ್ಕೆ ಇಳಿಯಲೇ ಇಲ್ಲ. ಮುಂದೇನು ಅಂತಾ ಪೊಲೀಸರು ಆತಂಕಕ್ಕೊಳಗಾಗುವಷ್ಟರಲ್ಲಿ ಅಲ್ಲಿ ಚಮತ್ಕಾರವೇ ನಡೆದುಹೋಯ್ತು.

ಒಂದಾದ ಮೇಲೊಂದರಂತೆ ಬಂದ ಲಾರಿಗಳು ಸೇತುವೆ ಕೆಳಗೆ ಸಾಲಾಗಿ ನಿಂತು ಬಿಟ್ಟವು. ಯಾವುದೇ ಕಾರಣಕ್ಕೂ ಆ ವ್ಯಕ್ತಿಗೆ ಕೆಳಕ್ಕೆ ಹಾರಲು ಅವಕಾಶವೇ ಇರಲಿಲ್ಲ. ಈ ರೀತಿ ಸುಮಾರು 13 ಲಾರಿಗಳು ಸಾಲಾಗಿ ನಿಂತು ಈ ಆತ್ಮಹತ್ಯೆಯನ್ನು ತಡೆದಿವೆ. ಈ ಹಿಂದೆ ಸಹ ಹಲವು ಬಾರಿ ಪೊಲೀಸರೇ ಈ ರೀತಿ ಲಾರಿಗಳನ್ನು ನಿಲ್ಲಿಸಿ ಆತ್ಮಹತ್ಯೆ ತಡೆದ ಉದಾಹರಣೆಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...