alex Certify
ಕನ್ನಡ ದುನಿಯಾ       Mobile App
       

Kannada Duniya

ಮರದ ಪೆಟ್ಟಿಗೆಯಲ್ಲಿ ಮಲಗಲು ಕೊಡಬೇಕು ಬಾಡಿಗೆ..!

bed

ಸ್ಯಾನ್ ಫ್ರಾನ್ಸಿಸ್ಕೋ ಅಂದ್ರೆ ದುಬಾರಿ ದುನಿಯಾ. ಬಾಡಿಗೆ ಮನೆಗಳ ದರ ಕೇಳಿದ್ರೆ ಎಂಥಾ ಶ್ರೀಮಂತರಿಗೂ ದಿಗಿಲಾಗುತ್ತೆ. ಸಿಂಗಲ್ ಬೆಡ್ ರೂಮ್ ಅಪಾರ್ಟ್ ಮೆಂಟ್ ಗೆ ತಿಂಗಳಿಗೆ 3,670 ಡಾಲರ್ ಬಾಡಿಗೆ ಕೊಡ್ಬೇಕು. ಹಾಗಾಗಿ ಮಧ್ಯಮ ವರ್ಗದವರಿಗೆ ಬದುಕೋದೇ ಕಷ್ಟವಾಗ್ಬಿಟ್ಟಿದೆ.

ಪೀಟರ್ ಬರ್ಕೊವಿಟ್ಜ್ ಎಂಬಾತ ತನ್ನ ಸ್ನೇಹಿತನ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದ್ದಾನೆ. 8 ಅಡಿ ಉದ್ದ, ನಾಲ್ಕೂವರೆ ಅಡಿ ಅಗಲದ ಮರದ ಪೆಟ್ಟಿಗೆಯಲ್ಲೇ ಅವನ ವಾಸ. ಆ ಪೆಟ್ಟಿಗೆಯಲ್ಲೇ ಪೀಟರ್ ಪ್ರತಿದಿನ ಮಲಗ್ತಾನೆ.

san_francisco_pod_rental_032916

ಕೇವಲ ಈ ಪೆಟ್ಟಿಗೆಗೆ ಅವನು ಕೊಡ್ತಾ ಇರೋ ಬಾಡಿಗೆ ಎಷ್ಟು ಗೊತ್ತಾ? 400 ಡಾಲರ್ ಅಂದ್ರೆ ಸುಮಾರು 26,000 ರೂಪಾಯಿ. ಸುಮಾರು 2 ವಾರಗಳ ಕಾಲ ಬಾಡಿಗೆ ಮನೆಗಾಗಿ ಹುಡುಕಿ ಸುಸ್ತಾದ ಪೀಟರ್, ಕೊನೆಗೆ ಈ ಮರದ ಪೆಟ್ಟಿಗೆಯಲ್ಲೇ ಆಶ್ರಯ ಪಡೆದಿದ್ದಾನೆ.

ಆತನ ರೂಮ್ ಮೇಟ್ಸ್ ತಲಾ 1000 ಡಾಲರ್ ಬಾಡಿಗೆ ಕೊಟ್ಟು ಕೋಣೆಯಲ್ಲಿ ಉಳಿದುಕೊಂಡಿದ್ದಾರೆ. ಹೊಸ ಉದ್ಯೋಗಕ್ಕಾಗಿ ಪೀಟರ್ ಚಿಕಾಗೋದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಶಿಫ್ಟ್ ಆಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...