alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶೇಷ ಗೊಂಬೆ ಮದುವೆಯಾಗಲು ಈತ ಖರ್ಚು ಮಾಡಿದ್ದೆಷ್ಟು ಗೊತ್ತಾ?!

ಜಪಾನಿನಲ್ಲಿ 35 ವರ್ಷದ ವ್ಯಕ್ತಿಯೊಬ್ಬ ವಿಶೇಷ ಗೊಂಬೆ ಜೊತೆ ಮದುವೆಯಾಗಿದ್ದಾನೆ. ಅಕಿಹಿಕೊ ಕೊಂಡೋ ಹೆಸರಿನ ವ್ಯಕ್ತಿ ಮದುವೆಗಾಗಿ ಖರ್ಚು ಮಾಡಿದ ಹಣ ಕೇಳಿದ್ರೆ ದಂಗಾಗ್ತಿರಾ. ಗೊಂಬೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಈಗ ಒಂದಲ್ಲ ಎರಡಲ್ಲ ಬರೋಬ್ಬರಿ 13 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.

ಗೊಂಬೆ ಜತೆ ಅಕಿಹಿಕೊ ಮದುವೆಯಾಗಿರುವುದು ತಾಯಿಗೆ ಇಷ್ಟವಿಲ್ಲವಂತೆ. ವಿಶೇಷವೆಂದ್ರೆ ಆತನ ಪತ್ನಿ ಅಂದ್ರೆ ಹೊಲೊಗ್ರಾಮ್ ವಯಸ್ಸು 16 ವರ್ಷ. ಈಕೆಗೆ ಹಸುನೇ ಮಿಕು ಎಂದು ಹೆಸರಿಡಲಾಗಿದೆ. ಟೊಕಿಯೋದಲ್ಲಿ ಮದುವೆ ಸಮಾರಂಭ ನಡೆದಿದೆ. ಮದುವೆಗೆ ಅಕಿಹಿಕೊ ಸಂಬಂಧಿಕರು ಹಾಗೂ ತಾಯಿ ಬಂದಿರಲಿಲ್ಲ. ಸುಮಾರು 40 ಮಂದಿ ಗೆಸ್ಟ್ ಬಂದಿದ್ದರು.

ಜಪಾನಿನಲ್ಲಿ ಅವಿವಾಹಿತರ ಸಂಖ್ಯೆ ಹೆಚ್ಚಿದೆ. ಒಂಟಿತನ ಹೋಗಲಾಡಿಸಲು ಯುವಜನತೆ ಆಧುನಿಕ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಮಿಕುಗೆ ಎಂದೂ ಮೋಸ ಮಾಡಲ್ಲ. ಆಕೆ ಪ್ರೀತಿಯಲ್ಲಿ ನಾನಿದ್ದೇನೆ. ಮಿಕು ಬಗ್ಗೆ ಸದಾ ಯೋಚಿಸುತ್ತಿರುತ್ತೇನೆಂದು ಅಕಿಹಿಕೊ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...