alex Certify
ಕನ್ನಡ ದುನಿಯಾ       Mobile App
       

Kannada Duniya

256 ವರ್ಷ ಬದುಕಿದ ವ್ಯಕ್ತಿ ಎಷ್ಟು ಪತ್ನಿಯರ ಅಂತ್ಯ ಸಂಸ್ಕಾರ ಮಾಡಿದ್ದ ಗೊತ್ತಾ?

man2

ಮನುಷ್ಯ ಹೆಚ್ಚು ಅಂದ್ರೆ 100, 150 ವರ್ಷ ಬದುಕಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. 150 ವರ್ಷದ ವ್ಯಕ್ತಿ ಇನ್ನೂ ಬದುಕಿದ್ದಾನೆ ಎಂದ್ರೆ ಎಲ್ಲರೂ ಆಶ್ಚರ್ಯಪಡ್ತೇವೆ. ಆದ್ರೆ ಚೀನಾದಲ್ಲೊಬ್ಬ ವ್ಯಕ್ತಿ 256 ವರ್ಷ ಬದುಕಿದ್ದ. ಲಿ ಚಿಂಗ್ ಯುಯೆನ್, 1736ರಲ್ಲಿ ಜನಿಸಿದ್ದನಂತೆ. ಅವನ ಜೀವಿತಾವಧಿಯಲ್ಲಿ 180 ಮಕ್ಕಳಿಗೆ ಜನ್ಮ ನೀಡಿದ್ದಾನಂತೆ. 23 ಪತ್ನಿಯರನ್ನು ಸಮಾಧಿ ಮಾಡಿದ್ದಾನಂತೆ.

ಮಾರ್ಚ್ 1933 ರಲ್ಲಿ ಈತ ಮರಣ ಹೊಂದಿದ್ದಾನೆ. ಆಗ ಈತನ ವಯಸ್ಸು 256 ವರ್ಷವಾಗಿತ್ತಂತೆ. ಈ ಬಗ್ಗೆ ಸ್ಪಷ್ಟವಾದ ಯಾವುದೇ ದಾಖಲೆಗಳಿಲ್ಲ. ಲಿ ಚಿಂಗ್ ಪ್ರಕೃತಿ ಚಿಕಿತ್ಸಕ ಹಾಗೂ ಗಿಡಮೂಲಿಕೆ ತಜ್ಞನಾಗಿದ್ದ. ಸಮರ ಕಲೆಗಳ ಬಗ್ಗೆ ತಿಳಿದಿದ್ದ. 1933 ರಲ್ಲಿ ನ್ಯೂಯಾರ್ಕ್ ಟೈಮ್ಸ್ ಮತ್ತು ಟೈಮ್ ಪತ್ರಿಕೆ ಲಿ ಚಿಂಗ್ ಜೊತೆ ಸಂದರ್ಶನ ನಡೆಸಿತ್ತು. 1827ರಲ್ಲಿ  ಚೀನಾ ಸರ್ಕಾರ, ಲಿ ಚಿಂಗ್ 150ನೇ ಹುಟ್ಟುಹಬ್ಬವನ್ನು ಆಚರಿಸಿತ್ತು. ಆದ್ರೆ ಚಿಂಗ್ ಜನ್ಮ ದಿನದಲ್ಲಿ ಸಾಕಷ್ಟು ಗೊಂದಲಗಳಿವೆ. ಆತ 1677 ರಲ್ಲಿ ಜನಿಸಿದ್ದನಾ ಇಲ್ಲ 1736 ರಲ್ಲಾ ಎಂಬ ಪ್ರಶ್ನೆಗೆ ಸರಿಯಾದ ದಾಖಲೆಗಳಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...