alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನಲ್ಲೇ ಸಜೀವ ದಹನವಾದ್ಲು ಭಾರತೀಯ ಮಹಿಳೆ

ನ್ಯೂಯಾರ್ಕ್ ನಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಅದರಲ್ಲಿದ್ದ ಭಾರತೀಯ ಮೂಲದ ಮಹಿಳೆ ಸಜೀವ ದಹನವಾಗಿದ್ದಾರೆ. ಬ್ರೂಕ್ಲಿನ್ ಕ್ವೀನ್ಸ್ ಎಕ್ಸ್ ಪ್ರೆಸ್ ವೇನಲ್ಲಿ ಕಾರು ಅಪಘಾತಕ್ಕೀಡಾಗಿದೆ. ಕೂಡಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಾರಿನ ಚಾಲಕ ಮಹಿಳೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಹಿಳೆ ಅಲ್ಲಿಂದ ಹೊರಬರಲಾಗದೆ ಸಜೀವ ದಹನವಾಗಿದ್ದಾರೆ. 25 ವರ್ಷದ ಹರ್ಲೀನ್ ಗ್ರೆವಾಲ್ ಮೃತ ದುರ್ದೈವಿ. ಕ್ಯಾಟರಿಂಗ್ ಕಂಪನಿಯೊಂದರಲ್ಲಿ ಈಕೆ ಕೆಲಸ ಮಾಡ್ತಾ ಇದ್ಲು. ಸಯೀದ್ ಅಹ್ಮದ್ ಎಂಬಾತ ಕಾರು ಚಲಾಯಿಸ್ತಾ ಇದ್ದ.

ತಡೆಗೋಡೆಯೊಂದಕ್ಕೆ ಕಾರು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಸಯೀದ್ ಸಣ್ಣಪುಟ್ಟ ಸುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಆದ್ರೆ ಹರ್ಲೀನ್ ಗೆ ಕಾರಿನಿಂದ ಹೊರಬರಲು ಸಹಾಯ ಕೂಡ ಮಾಡದೇ ಅಲ್ಲಿಂದ ಓಡಿ ಹೋಗಿದ್ದಾನೆ. ಸಯೀದ್ ಮದ್ಯಪಾನ ಮಾಡಿ ಕಾರು ಚಲಾಯಿಸ್ತಿದ್ದ ಅಂತಾ ಹೇಳಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...