alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಲ ಸಿಂಹ ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆಯಲೋದವನ ಪ್ರಾಣಕ್ಕೆ ಕುತ್ತು

selfieಸೆಲ್ಫಿ ದುರಂತಗಳು ಮುಂದುವರೆಯುತ್ತಲೇ ಇವೆ. ಈಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಗೊಂಡಿದೆ. ಕಡಲ ಸಿಂಹವನ್ನು ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಲು ಹೋದ ಉದ್ಯಮಿಯೊಬ್ಬ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ ಘಟನೆ ಚೀನಾದಲ್ಲಿ ನಡೆದಿದೆ.

ಚೀನಾದ ಕ್ಸಿಕ್ಸಿಕು ಪಾರ್ಕ್ ನಲ್ಲಿ ಮೇ 11 ರಂದು ಈ ಘಟನೆ ನಡೆದಿದ್ದು, ಜಿಯ ಲಿಜುನ್ ಎಂಬ ಉದ್ಯಮಿಯೊಬ್ಬ, ಕಡಲ ಸಿಂಹವನ್ನು ಹಿನ್ನಲೆಯಾಗಿಟ್ಟುಕೊಂಡು ವಿಡಿಯೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ತನ್ನ ಸ್ನೇಹಿತರ ಜೊತೆ ಈತ ಮಾತನಾಡುತ್ತಿದ್ದಾಗಲೇ ಬರೋಬ್ಬರಿ 1.5 ಟನ್ ತೂಕದ ಕಡಲ ಸಿಂಹ ಈತನನ್ನು ನೀರಿಗೆ ಎಳೆದುಕೊಂಡು ಹೋಗಿದೆ.

ಅಲ್ಲಿದ್ದ ಇತರೆ ಪ್ರವಾಸಿಗರು ಇದನ್ನು ಕಣ್ಣಾರೆ ಕಂಡರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪಾರ್ಕ್ ಸಿಬ್ಬಂದಿ ಉದ್ಯಮಿಯನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಲ್ಲೀನನಾಗಿದ್ದ ಜಿಯ ಲಿಜುನ್, ಕಡಲ ಸಿಂಹ ದಾಳಿ ಮಾಡುವುದನ್ನು ಅರಿಯುವಲ್ಲಿ ವಿಫಲವಾಗಿದ್ದೇ ದುರಂತಕ್ಕೆ ಕಾರಣವೆನ್ನಲಾಗಿದೆ. ಪ್ರವಾಸಿಗರು, ಪಾರ್ಕ್ ಸಿಬ್ಬಂದಿ ವೀಕ್ಷಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. ದುರಂತ ಘಟನೆಯ ಹೊಣೆ ಹೊತ್ತಿಕೊಂಡಿರುವ ಪಾರ್ಕ್ ಆಡಳಿತ, ಉದ್ಯಮಿಯ ಕುಟುಂಬಕ್ಕೆ 900,000 ಯುವಾನ್ (94,000 ಪೌಂಡ್) ಪರಿಹಾರ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...