ಬ್ರಿಟನ್ ನಲ್ಲಿ ಅಪರೂಪದ ಚಿಟ್ಟೆಯನ್ನು ಹಿಡಿದು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ಜಗತ್ತಿನಲ್ಲಿ ಅತ್ಯಂತ ಅಪರೂಪಕ್ಕೆ ಕಾಣಸಿಗುವ ನೀಲಿ ಬಣ್ಣದ ಚಿಟ್ಟೆಯನ್ನು ಹತ್ಯೆ ಮಾಡಿರುವ 57 ವರ್ಷದ ಫಿಲಿಪ್ ಕಲ್ಲೆನ್ ವಿರುದ್ಧ 6 ಆರೋಪಗಳಿವೆ.
2015 ರ ಜೂನ್ 18 ರಂದು ಫಿಲಿಪ್, ಗ್ಲೌಸೆಸ್ಟರ್ ಶೈರ್ ನ ಸಿರೆನ್ಸಿಸ್ಟರ್ ನಲ್ಲಿ ‘ಲಾರ್ಜ್ ಬ್ಲೂ’ ಹೆಸರಿನ ಚಿಟ್ಟೆಯನ್ನು ಹಿಡಿದು ಕೊಂದಿದ್ದಾನಂತೆ. ಜೂನ್ 17 ರಿಂದ 20 ರ ಸಮಯದಲ್ಲಿ ಸೋಮರ್ಸೆಟ್ ನ ಕೊಲ್ಲಾರ್ಡ್ ಹಿಲ್ ನಲ್ಲಿ ಮತ್ತೊಂದು ಚಿಟ್ಟೆಯನ್ನು ಹತ್ಯೆ ಮಾಡಿದ್ದಾನಂತೆ.
2016 ರ ಫೆಬ್ರವರಿ 13 ರಂದು ಫಿಲಿಪ್ ಮನೆಯ ಬಳಿ ಮೃತ ಚಿಟ್ಟೆಗಳು ಪತ್ತೆಯಾಗಿದ್ದವು. ಆದ್ರೆ ತನ್ನ ಮೇಲಿರುವ ಆರೋಪಗಳನ್ನು ಫಿಲಿಪ್ ತಳ್ಳಿಹಾಕಿದ್ದಾನೆ. ಮಾರ್ಚ್ 16 ರಿಂದ ಕೋರ್ಟ್ ನಲ್ಲಿ ವಿಚಾರಣೆ ಎದುರಿಸಲಿದ್ದಾನೆ. ಫಿಲಿಪ್ ಚಿಟ್ಟೆಗಳನ್ನು ಹಿಡಿದು ಕೊಲ್ಲುತ್ತಿರುವುದನ್ನು ನೋಡಿರುವುದಾಗಿ ಮೂವರು ಸಾಕ್ಷ್ಯ ನುಡಿದಿದ್ದಾರೆ. ಆರೋಪ ಸಾಬೀತಾದರೆ ಫಿಲಿಪ್ ಗೆ ಜೈಲು ಶಿಕ್ಷೆಯಾಗಬಹುದು ಅಥವಾ ದಂಡ ವಿಧಿಸುವ ಸಾಧ್ಯತೆ ಇದೆ.