alex Certify
ಕನ್ನಡ ದುನಿಯಾ       Mobile App
       

Kannada Duniya

ದೇಹಕ್ಕೆ ಸರಳು ಹೊಕ್ಕರೂ ಮೊಬೈಲ್‌ನಲ್ಲಿ ಗೇಮ್‌ ಆಡ್ತಿದ್ದ ಭೂಪ…!

ಅದೃಷ್ಟ ಇದ್ದರೆ ಮನುಷ್ಯ ಬಚಾವಾಗುತ್ತಾನೆ ಎಂಬ ಮಾತು ಮತ್ತೆ ಸತ್ಯವಾಗಿದೆ. ಹಲವಾರು ಬಾರಿ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಳ್ಳುವುದನ್ನು ಕಂಡಿದ್ದೇವೆ. ಈ ಸಮಯದಲ್ಲಿ ಬದುಕಿದೆಯಾ ಬಡ ಜೀವ ಎಂದೆನಿಸುವುದೇ ಹೆಚ್ಚು. ಆದರೆ ಚೀನಾದಲ್ಲಿ ನಡೆದ ಕಥೆಯೇ ಬೇರೆ.

ಕಾರು ಅಪಘಾತದ ವೇಳೆ, ಲೋಹದ ಸರಳು, ವ್ಯಕ್ತಿಯ ಎದೆಯ ಮೇಲ್ಭಾಗಕ್ಕೆ ಚುಚ್ಚಿಕೊಂಡಿದೆ. ಆದರೂ ಈತನ ಪ್ರಾಣ ಹೋಗಿಲ್ಲ. ಅಂಬ್ಯುಲೆನ್ಸ್‌ಗೆ ಕರೆ ಮಾಡಿದ ವ್ಯಕ್ತಿ, ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸುವವರೆಗೆ ತನ್ನ ಮೊಬೈಲ್‌ನಲ್ಲಿ ಗೇಮ್‌ ಆಡಿಕೊಂಡು ಕುಳಿತಿದ್ದಾನೆ.

ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಚೀನಾದ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಸುಮಾರು 6 ಕೋಟಿ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಮೊದಲಿಗೆ ವಿಡಿಯೋವನ್ನು ವೆಬ್‌ಸೈಟ್‌ ಒಂದರಲ್ಲಿ ಸ್ಟ್ರೀಮಿಂಗ್‌ ಮಾಡಲಾಗಿತ್ತು.

ಈ ಅಪಘಾತ ಲೈಒಯಂಗ್‌ ಪ್ರಾಂತ್ಯದಲ್ಲಿ ಕಳೆದ ವಾರ ನಡೆದಿದ್ದು, ಕಾರು ಚಾಲಕ, ರೈಲ್ವೆ ಭದ್ರತೆಗೆ ಅಳವಡಿಸುವ ರಾಡ್‌ಗೆ ಡಿಕ್ಕಿ ಹೊಡೆದಿದ್ದ. ಇದರಿಂದ 4 ಮೀಟರ್ ಉದ್ದದ ಅಲ್ಯುಮಿನಿಯಂ ಸರಳು ಆತನ ದೇಹಕ್ಕೆ ಹೊಕ್ಕಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...