alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಡಿಕ್ಕಿ ಹೊಡೆದ ಮೇಲೂ ಆತ ಹೋಗಿದ್ದೆಲ್ಲಿಗೆ ಗೊತ್ತಾ?

pub

ಅಪಘಾತ ಅಂದ್ರೇನೇ ಒಂದು ರೀತಿಯ ಭಯ. ಅದರಲ್ಲೂ ನಮಗೇನಾದ್ರೂ ಬಸ್ ಡಿಕ್ಕಿ ಹೊಡೆದ್ರೆ ದೇವರೇ ಗತಿ. ಒಂದು ವೇಳೆ ಪೆಟ್ಟಾಗದೇ ಇದ್ರೂ ಆ ಭಯಕ್ಕೆ ಎಂಥಾ ಗಟ್ಟಿಗರಾದ್ರೂ ಥರಗುಟ್ಟಿ ಹೋಗ್ತಾರೆ. ಆದ್ರೆ ಲಂಡನ್ ನಲ್ಲಿ ನಡೆದಿರೋ ಘಟನೆ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ.

ಗನ್ ಸ್ಟ್ರೀಟ್ ನಲ್ಲಿ ಸಿಮೊನ್ ಸ್ಮಿತ್ ಎಂಬ 51 ವರ್ಷದ ವ್ಯಕ್ತಿ ರಸ್ತೆ ದಾಟುತ್ತಿದ್ದ. ಈ ವೇಳೆ ವೇಗವಾಗಿ ಬಂದ ಬಸ್ ಅವನಿಗೆ ಡಿಕ್ಕಿ ಹೊಡೆದಿದೆ. ಉಜ್ಜಿಕೊಂಡೇ ಬಂದ ಬಸ್ ಅವನನ್ನು 20 ಅಡಿ ದೂರಕ್ಕೆ ಎಸೆದಿದೆ. ಈ ಅಪಘಾತದ ದೃಶ್ಯ ನೋಡಿದ್ರೆ ಎದೆ ಝಲ್ಲೆನುತ್ತೆ.

ಆದ್ರೆ ಸಿಮೊನ್ ಸ್ಮಿತ್ ಗೆ ಮಾತ್ರ ಬಸ್ ಡಿಕ್ಕಿ ಹೊಡೆದ್ರೂ ಏನೂ ಆಗಿಲ್ಲ. ಅದೃಷ್ಟವಶಾತ್ ಪಾರಾಗಿದ್ದಾನೆ. ಅದೆಲ್ಲಕ್ಕಿಂತ್ಲೂ ವಿಚಿತ್ರ ಅಂದ್ರೆ ಅಪಘಾತವಾದ ಮರುಕ್ಷಣವೇ ಅಲ್ಲಿಂದ ಎದ್ದು ಸಿಮೊನ್, ನೇರವಾಗಿ ಪಬ್ ನತ್ತ ನಡೆದಿದ್ದಾನೆ.

ತನಗೆ ಡಿಕ್ಕಿ ಹೊಡೆದ ಬಸ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಪೊಲೀಸರನ್ನೂ ಸ್ಥಳಕ್ಕೆ ಕರೆಸಿಲ್ಲ. ಆಸ್ಪತ್ರೆಗೂ ಹೋಗಿಲ್ಲ. ಬದಲಾಗಿ ಅಲ್ಲೇ ಸಮೀಪದಲ್ಲಿದ್ದ ಪಬ್ ಗೆ ಹೋಗಿ ಗುಂಡು ಹಾಕಿದ್ದಾನೆ. ಈ ಘಟನೆ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...