alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮನುಷ್ಯನಿಗಿದೆ ನಾಲ್ಕು ಕಿಡ್ನಿ

chineseman-ll

ಸಾಮಾನ್ಯವಾಗಿ ವ್ಯಕ್ತಿಯ ಶರೀರದಲ್ಲಿ ಎರಡು ಕಿಡ್ನಿಗಳಿರುತ್ತವೆ. ಆದ್ರೆ ಚೀನಾದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ನಿಮಗೆ ಇದ್ರ ಬಗ್ಗೆ ನಂಬಿಕೆ ಬರದೆ ಇರಬಹುದು, ಆದ್ರೆ ಇದು ಸತ್ಯ. ಚೀನಾದ ಗಿಜಹಾವೋ ಪ್ರಾಂತ್ಯದಲ್ಲಿ ಕಾಯೇಲಿಯನ್ ವಾಂಗ್ ಹೆಸರಿನ ವ್ಯಕ್ತಿ ಹೊಟ್ಟೆಯಲ್ಲಿ ನಾಲ್ಕು ಕಿಡ್ನಿ ದೊರೆತಿದೆ.

28 ವರ್ಷದ ವಾಂಗ್ ಗೆ ಹೊಟ್ಟೆನೋವು ಜಾಸ್ತಿಯಾಗಿದೆ. ಓಡಾಡಲೂ ಪರದಾಡಿದ್ದಾನೆ ವಾಂಗ್. ನಂತ್ರ ಆತನನ್ನು ಆಸ್ಪತ್ರೆಗೆ  ಸೇರಿಸಲಾಗಿದೆ. ಪರೀಕ್ಷೆ ನಡೆಸಿದಾಗ ವೈದ್ಯರು ಕಂಗಾಲಾಗಿದ್ದಾರೆ. ಎರಡು ಕಿಡ್ನಿ ಬದಲು ವಾಂಗ್ ಗೆ ನಾಲ್ಕು ಕಿಡ್ನಿಗಳಿದ್ದವು. ಅದ್ರಲ್ಲಿ ಒಂದಕ್ಕೆ ಸೋಂಕು ತಗಲಿದ್ದರಿಂದ ನೋವು ಶುರುವಾಗಿತ್ತು. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಒಂದು ಕಿಡ್ನಿಯನ್ನು ತೆಗೆದಿದ್ದಾರೆ. ಸದ್ಯ ವಾಂಗ್ ಆರೋಗ್ಯ ಸುಧಾರಿಸುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಉಳಿದ ಮೂರು ಕಿಡ್ನಿಗಳು ಆರೋಗ್ಯವಾಗಿವೆಯಂತೆ. ಇದ್ರಿಂದ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಬಾಲ್ಯದಲ್ಲಿ ವಾಂಗ್ ಆರೋಗ್ಯವಾಗಿ ಶಕ್ತಿಯುತವಾಗಿದ್ದ ಎಂದು ಪಾಲಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...