alex Certify
ಕನ್ನಡ ದುನಿಯಾ       Mobile App
       

Kannada Duniya

ರೋಬೋಟ್ ಜೊತೆ ಸೆಕ್ಸ್ ಮಾಡ್ತಾನೆ ಪತಿ, ಪತ್ನಿ ಏನ್ಮಾಡ್ತಾಳೆ ಗೊತ್ತಾ?

ಸೆಕ್ಸ್ ಡಾಲ್ ಗಳು ಜಗತ್ತಿನಲ್ಲಿ ಎಷ್ಟೋ ಜನರ ಬದುಕನ್ನೇ ಬದಲಾಯಿಸಿವೆ. ಸೆಲೆಬ್ರಿಟಿಗಳಂತೆ ಅಂದವಾಗಿ ಕಾಣುವ ರೋಬೋಟ್ ಗಳು ಹಲವರ ಸಂಗಾತಿಗಳಾಗಿವೆ. ಕೆಲವರಂತೂ ಪತ್ನಿ ಇದ್ದರೂ ರೋಬೋಟ್ ಜೊತೆಗೆ ಹಾಸಿಗೆ ಹಂಚಿಕೊಳ್ತಾರಂತೆ. ಜಪಾನ್ ನಲ್ಲಂತೂ ಇಂಥವರ ಸಂಖ್ಯೆಯೇ ಹೆಚ್ಚು.

58 ವರ್ಷದ ವ್ಯಕ್ತಿಯೊಬ್ಬ ಸೆಕ್ಸ್ ಡಾಲ್ ಜೊತೆಗೆ ನಂಟು ಬೆಳೆಸಿಕೊಂಡಿದ್ದಾನೆ. ಇದು ಆತನ ಪತ್ನಿ ಮೇಲೆ ಸ್ವಲ್ಪವೂ ಪರಿಣಾಮ ಬೀರಿಲ್ಲವಂತೆ. ಎಪ್ರಿಲ್ ಹೆಸರಿನ ರೋಬೋಟ್ ಅನ್ನು ಪ್ರಾಣಕ್ಕಿಂತ ಹೆಚ್ಚಾಗಿ ಈತ ಪ್ರೀತಿಸ್ತಾನೆ. ಅವಳನ್ನು ಡಿನ್ನರ್ ಡೇಟ್ ಗೆ ಕರೆದೊಯ್ತಾನೆ.

ವಾರದಲ್ಲಿ ನಾಲ್ಕು ದಿನ ರೋಬೋಟ್ ಜೊತೆಗೆ ಸೆಕ್ಸ್ ಮಾಡ್ತಾನಂತೆ. ಆದ್ರೂ ಪತ್ನಿ ಅದಕ್ಕೆ ಆಕ್ಷೇಪಿಸುತ್ತಿಲ್ಲ ಅಂತಾ ಹೆಮ್ಮೆಪಡ್ತಾನೆ. ಐದು ಅಡಿ ಎತ್ತರದ ಈ ಸೆಕ್ಸ್ ಡಾಲ್ ಬೆಲೆ 1.7 ಲಕ್ಷ ರೂಪಾಯಿ. ಆತನ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ಲು, ಪತ್ನಿ ಅವಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಿದ್ರಿಂದ ಸೆಕ್ಸ್ ಡಾಲ್ ಜೊತೆ ಸಂಬಂಧ ಬೆಳೆಯಿತು ಎನ್ನುತ್ತಿದ್ದಾನೆ.

ಪತ್ನಿ ಹಾಗೂ ರೋಬೋಟ್ ಇಬ್ಬರ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಿಕೋ ಅಂದ್ರೆ ನನಗೆ ಕಷ್ಟವಾಗುತ್ತದೆ ಅನ್ನೋದು ಅವನ ಅಭಿಪ್ರಾಯ. ಪತ್ನಿಗಾಗಿ ಸೆಕ್ಸ್ ಡಾಲ್ ಬಿಡಲು ಆತ ಸಿದ್ಧನಿಲ್ಲ. ರೋಬೋಟ್ ಗೆ ತರಹೇವಾರಿ ಡ್ರೆಸ್ ಹಾಕೋದು, ಮೇಕಪ್ ಮಾಡೋದು ಅಂದ್ರೆ ಜೇಮ್ಸ್ ಗೆ ಇಷ್ಟ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...