alex Certify
ಕನ್ನಡ ದುನಿಯಾ       Mobile App
       

Kannada Duniya

17 ಸೆಕೆಂಡ್ ಗಳಲ್ಲಿ 50 ಹಸಿ ಮೊಟ್ಟೆ ಸ್ವಾಹಾ…!

raw-eggs-650_650x400_71498477999

ಇಂಟರ್ನೆಟ್ ನಲ್ಲಿ ಫೇಮಸ್ ಆಗ್ಬೇಕು ಅಂತಾ ಕೆಲವರು ಎಂತಹ ಸಾಹಸಕ್ಕೆ ಬೇಕಾದ್ರೂ ಕೈಹಾಕ್ತಾರೆ. ಇಂಥದ್ದೇ ಕ್ರೇಝಿಗಾಗಿ ಚೀನಾದಲ್ಲೊಬ್ಬ ಒಮ್ಮೆಲೇ 50 ಹಸಿ ಮೊಟ್ಟೆಗಳನ್ನು ಗುಳುಂ ಮಾಡಿದ್ದಾನೆ. 5 ಬಿಯರ್ ಮಗ್ ಗಳಲ್ಲಿ ಮೊಟ್ಟೆಗಳನ್ನೆಲ್ಲಾ ಒಡೆದಿಟ್ಟುಕೊಂಡ ಈತ 17 ಸೆಕೆಂಡ್ ಗಳಲ್ಲಿ ಎಲ್ಲವನ್ನೂ ಕುಡಿದು ಮುಗಿಸಿದ್ದಾನೆ.

ಈ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದ್ದು, 6 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ. ಪ್ರತಿ ಮಗ್ ನಲ್ಲೂ ಆತ ತಲಾ 10 ಮೊಟ್ಟೆಗಳನ್ನು ಒಡೆದಿಟ್ಟುಕೊಂಡಿದ್ದ. ಸ್ವಲ್ಪ ಕೂಡ ಬಿಡುವಿಲ್ಲದಂತೆ ಒಂದಾದ ಮೇಲೊಂದು ಮಗ್ ಅನ್ನು ಬಾಯಿಗಿಟ್ಟುಕೊಂಡು ಮೊಟ್ಟೆಗಳನ್ನೆಲ್ಲ ಸ್ವಾಹಾ ಮಾಡಿದ್ದಾನೆ.

ಎಲ್ಲಾ ಮೊಟ್ಟೆಗಳನ್ನು ಕುಡಿದು ಮುಗಿಸಿದ ಮೇಲೆ ಕ್ಯಾಮರಾ ಮುಂದೆ ತನ್ನ ವಿಕ್ಟರಿ ಸಂಭ್ರಮವನ್ನು ಆಚರಿಸಿದ್ದಾನೆ. ಈ ವಿಡಿಯೋವನ್ನು ನೇರ ಪ್ರಸಾರ ಮಾಡಲಾಗಿತ್ತು. ಈ ಸಾಹಸದ ಬಳಿಕ ಅವನಿಗೆ ಫೇಸ್ಬುಕ್ ನಲ್ಲಿ ಇನ್ನಷ್ಟು ಸ್ನೇಹಿತರು ಸಿಕ್ಕಿದ್ದಾರಂತೆ. ಇಂಟರ್ನೆಟ್ ನಲ್ಲಿ ಫೇಮಸ್ ಆಗಲು ಇದಕ್ಕಿಂತ ಒಳ್ಳೆ ಐಡಿಯಾ ಇತ್ತು. ಹಸಿ ಮೊಟ್ಟೆಗಳು ಆರೋಗ್ಯಕ್ಕೆ ಅಪಾಯಕಾರಿ ಅಂತಾ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...