alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿ ಬೆಳಗಾಗೋದ್ರಲ್ಲಿ ಕುರುಡಾಯ್ತು ಕಣ್ಣು, ಕಾರಣ ಸೆಕ್ಸ್..!

ಅತಿಯಾದ್ರೆ ಅಮೃತವೂ ವಿಷವಾಗುತ್ತೆ ಅನ್ನೋ ಮಾತಿದೆ. ಸೆಕ್ಸ್ ವಿಚಾರದಲ್ಲಂತೂ ಇದು ಅಕ್ಷರಶಃ ಸತ್ಯ. ಅತಿಯಾದ ಹುರುಪಿನಲ್ಲಿ ದೈಹಿಕ ಸಂಬಂಧ ಬೆಳೆಸಿದ ವ್ಯಕ್ತಿಯೊಬ್ಬ ತನ್ನ ಒಂದು ಕಣ್ಣನ್ನೇ ಕಳೆದುಕೊಂಡಿದ್ದಾನೆ. ದಿಢೀರನೆ 29 ವರ್ಷದ ಯುವಕನ ಎಡಗಣ್ಣಿನ ದೃಷ್ಟಿಯೇ ಹೋಗಿತ್ತು.

ಸೆಕ್ಸ್ ಮಾಡಿದ ಮರುದಿನ ಬೆಳಗ್ಗೆ ಆತನಿಗೆ ಇದು ಅರಿವಿಗೆ ಬಂದಿತ್ತು. ಸೆಕ್ಸ್ ಮಾಡುವಾಗ ಕಿಬ್ಬೊಟ್ಟೆಯ ಸ್ನಾಯುಗಳ ಮೇಲೆ ಒತ್ತಡ ಬಿದ್ದಿದ್ದರಿಂದ ಹಾಗೂ ಉಸಿರಾಟ ಹಿಡಿದಿಟ್ಟುಕೊಂಡಿದ್ದರಿಂದ ಈ ರೀತಿ ಆಗಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಎದೆಯಲ್ಲಿ ಒತ್ತಡ ಹೆಚ್ಚಾಗಿ ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ ಅಂತಾ ಹೇಳಿದ್ದಾರೆ.

ಕಣ್ಣುಗಳಿಗೆ ರಕ್ತ ಪೂರೈಸುವ ನಾಳ ಬಂದ್ ಆಗಿದ್ರಿಂದ ಯುವಕನಿಗೆ ದೃಷ್ಟಿ ಹೋಗಿದೆ. ಮೊದಲು ವೈದ್ಯರಿಗೆ ಕೂಡ ದಿಢೀರನೆ ಕಣ್ಣು ಹೋಗಿದ್ದು ಹೇಗೆ ಅನ್ನೋದು ಸ್ಪಷ್ಟವಾಗಿರಲಿಲ್ಲ. ಆದ್ರೆ ಎರಡನೇ ದಿನ ಯುವಕನ ದೈಹಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ ವೈದ್ಯರಿಗೆ ಕಾರಣ ಸ್ಪಷ್ಟವಾಗಿತ್ತು.

ಇದನ್ನು postcoital valsavla retinopathy ಎಂದು ಕರೆಯಲಾಗುತ್ತದೆ. ಈ ರೀತಿ ಜೋರಾಗಿ ಸೆಕ್ಸ್ ಮಾಡುವುದರಿಂದ ಮೆಮೊರಿ ಲಾಸ್ ಕೂಡ ಆಗಬಹುದು ಅಂತಾ ವೈದ್ಯರು ಎಚ್ಚರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...