alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಗೆ ನೋಟಿನ ಹಾರ ಹಾಕಿ ಪ್ರೀತಿ ವ್ಯಕ್ತಪಡಿಸಿದ ಯುವಕ

ಯುವಕನೊಬ್ಬ ತನ್ನ ಪ್ರಿಯತಮೆಯ ಹುಟ್ಟುಹಬ್ಬದಂದು ಪ್ರೀತಿ ವ್ಯಕ್ತಪಡಿಸಲು ಲಕ್ಷಾಂತರ ಮೌಲ್ಯದ ನೋಟುಗಳನ್ನು ಪೋಣಿಸಿದ್ದ ಹಾರ ಹಾಕಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಚೀನಾದಲ್ಲಿ ಈ ಘಟನೆ ನಡೆದಿದ್ದು, ಈ ಯುವಕ ಮೇ 16 ರಂದು ತನ್ನ ಪ್ರಿಯತಮೆಯ ಹುಟ್ಟುಹಬ್ಬಕ್ಕಾಗಿ ವಿಶೇಷವಾದ ಗಿಫ್ಟ್ ನೀಡಲು ಬಯಸಿದ್ದ. ಇದಕ್ಕಾಗಿ ಸುಮಾರು 30000 ಯುವಾನ್ ಚೀನಾ ಕರೆನ್ಸಿ (ಅಂದಾಜು 35 ಲಕ್ಷದ 70 ಸಾವಿರ ರೂ.) ಮೌಲ್ಯದ ನೋಟುಗಳ ಹಾರವನ್ನು ವಿಶೇಷವಾಗಿ ಮಾಡಿಸಿದ.

ಪ್ರಿಯತಮೆಯ ಹುಟ್ಟುಹಬ್ಬಕ್ಕೆ ಆತ ಈ ಹಾರವನ್ನು ಹಾಕಿದ್ದು, ಇದರ ಫೋಟೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೆಲವರು ಆತನ ಹುಚ್ಚು ಪ್ರೀತಿಗೆ ಟೀಕೆ ಮಾಡಿದ್ದರೆ ಮತ್ತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆದರೆ ಯುವಕನ ಹುಚ್ಚು ಪ್ರೀತಿ ಚೀನಾದ ಕಾನೂನು ಪ್ರಕಾರ ಅಪರಾಧವಾಗಿದ್ದು, ಚೀನಾ ಕರೆನ್ಸಿಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಆತನ ವಿರುದ್ಧ ಕ್ರಮಕೈಗೊಳ್ಳಲು ಇದೀಗ ಅಧಿಕಾರಿಗಳು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...