alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳನ್ನೇ ದೂರ ಮಾಡಿದೆ ಟಾಪ್ಲೆಸ್ ಟ್ಯಾಟೂ

ಟ್ಯಾಟೂವಿನಿಂದಾಗಿ ಪ್ರೇಮಿಗಳು ದೂರವಾದ ಸ್ಟೋರಿ ಇದು. ಮಲಕ್ಯೆ ಬ್ರೂಕ್ಸ್ ಎಂಬ ಯುವಕ ಮತ್ತವನ ಗೆಳತಿ ಇಬಿಜಾ ದ್ವೀಪಕ್ಕೆ ತೆರಳಿದ್ರು. ಅಲ್ಲಿ ಖುಷಿಯಾಗಿ ಕಾಲ ಕಳೆದಿದ್ದಾರೆ. ಇಬ್ಬರಿಗೂ ಟ್ಯಾಟೂ ಹಾಕಿಸಿಕೊಳ್ಳೋ ಆಸೆಯಾಗಿತ್ತು. ಬ್ರೂಕ್ಸ್ ಬರೋಬ್ಬರಿ 500 ಡಾಲರ್ ಕೊಟ್ಟು ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡ.

ತನ್ನ ಪ್ರಿಯತಮೆಯ ಟಾಪ್ ಲೆಸ್ ಅವತಾರವನ್ನೇ ಬೆನ್ನಿನ ಮೇಲೆ ಬಿಡಿಸಿಕೊಂಡಿದ್ದ. ರಜೆ ಕಳೆಯುವವರೆಗೂ ಆ ಟ್ಯಾಟೂ ಬ್ರೂಕ್ಸ್ ಗೆ ಒಂದು ರೀತಿ ಹೆಮ್ಮೆ ತಂದುಕೊಟ್ಟಿತ್ತು. ಆದ್ರೆ ವಾಸ್ತವದಲ್ಲಿ ನಡೆದಿದ್ದೇ ಬೇರೆ. ಜನರೆಲ್ಲ ಬ್ರೂಕ್ಸ್ ಟ್ಯಾಟೂವನ್ನೇ ಗುರಾಯಿಸ್ತಾ ಇದ್ರು.

ಈತ ಮನುಷ್ಯನೋ ಅಥವಾ ಏಲಿಯನ್ ಇರಬಹುದಾ ಅನ್ನೋ ರೀತಿ ನೋಡ್ತಾ ಇದ್ರು. ಪ್ರಿಯತಮೆಯನ್ನು ನಗ್ನವಾಗಿ ಟ್ಯಾಟೂನಲ್ಲಿ ಪ್ರದರ್ಶನ ಮಾಡ್ತಿದ್ದಾನೆ ಅಂತಾ ಅಚ್ಚರಿ ವ್ಯಕ್ತಪಡಿಸುತ್ತಿದ್ರು. ಇದನ್ನೆಲ್ಲ ಸಹಿಸಲು ಬ್ರೂಕ್ಸ್ ಗೆ ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಪ್ರೇಮಿಗಳು ದೂರವಾಗಿದ್ದಾರೆ. ಆದ್ರೆ ಮಾಜಿ ಗೆಳತಿಯ ಟಾಪ್ ಲೆಸ್ ಟ್ಯಾಟೂ ಈಗಲೂ ಆತನ ಬೆನ್ನಿಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...