alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟ್ಟೆ ಆಪರೇಷನ್ ಗೆ ಮೊದಲು ಬಿರಿಯಾನಿ ಬೇಡಿಕೆಯಿಟ್ಟ ಭೂಪ…!

ಹೊಟ್ಟೆ ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬನಿಗೆ ಹೊಟ್ಟೆ ಆಪರೇಷನ್ ಮಾಡಬೇಕು ಎಂದಾಗ, ಬೇರೆ ಏನನ್ನು ಯೋಚಿಸದೆ, ದುಬೈ ಭೂಪ “ಏನಾದರೂ ಆಗಲಿ ಮೊದಲು ನನಗೆ ಚಿಕನ್ ಬಿರಿಯಾನಿ ಕೊಡಿಸಿ” ಎಂದಿದ್ದಾನೆ.

ವೃತ್ತಿಯಲ್ಲಿ‌ ಎಂಜಿನಿಯರ್ ಆಗಿರುವ ದುಬೈನ ಗುಲಾಬ್ ಅಬ್ಬಾಸ್ ಅವರಿಗೆ ಕೆಲ ದಿನಗಳ ಹಿಂದೆ ಹೊಟ್ಟೆಯಲ್ಲಿ ಮೂರು ಕ್ಯಾನ್ಸರ್ ಗಡ್ಡೆಯಿರುವುದು ಪತ್ತೆಯಾಗಿತ್ತು. ಈ ಗೆಡ್ಡೆ ಬಹುತೇಕ ಹೊಟ್ಟೆಯನ್ನು ಆವರಿಸಿದ್ದರಿಂದ ಅನಿವಾರ್ಯವಾಗಿ ಆಪರೇಷನ್ ಮಾಡಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆಗ ಅಬ್ಬಾಸ್, ಹೊಟ್ಟೆ ಆಪರೇಷನ್ ಮಾಡುವ ಮೊದಲು ನನಗೆ ಚಿಕನ್ ಬಿರಿಯಾನಿ ಕೊಡಿಸಿ ಎನ್ನುವ ಮೂಲಕ ಬಿರಿಯಾನಿ ಪ್ರೇಮ ಮೆರೆದಿದ್ದಾನೆ.

ಜೀವಕ್ಕಿಂತ ಬಿರಿಯಾನಿ ಮುಖ್ಯವೆಂದ ಭೂಪನ ಕೊನೆಯ ಆಸೆಯನ್ನು ಪೂರೈಸಲು ಆತನ ಪತ್ನಿ ಚಿಕನ್ ಬಿರಿಯಾನಿಯನ್ನು ತಯಾರಿಸಿದ್ದು, ಸಹೋದರ ಅದನ್ನು ಆಸ್ಪತ್ರೆಗೆ ತಂದು ಕೊಟ್ಟಿದ್ದಾನೆ. ಅದನ್ನು ತಿಂದ ಬಳಿಕವೇ ಅಬ್ಬಾಸ್ ಶಸ್ತ್ರಚಿಕಿತ್ಸೆಗೆ ತೆರಳಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಬ್ಬಾಸ್, ಶಸ್ತ್ರಚಿಕಿತ್ಸೆ ಮಾಡಬೇಕು ಎಂದಾಗ, ನಾನು ವೈದ್ಯರ ಬಳಿ ಚಿಕನ್ ತಿನ್ನಬಹುದೇ ಎಂದಿದ್ದೆ. ಆಪರೇಷನ್ ಮಾಡಿಸಿಕೊಳ್ಳುವುದು ಸುಲಭದ ಕೆಲಸವಲ್ಲ ಎನ್ನುವುದು ಗೊತ್ತು. ಆದರೆ ಜೀವ ಉಳಿಸಿಕೊಳ್ಳಲು ಇದು ಅನಿವಾರ್ಯ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...