alex Certify
ಕನ್ನಡ ದುನಿಯಾ       Mobile App
       

Kannada Duniya

ಜಡ್ಜ್ ಎದುರಲ್ಲೇ ಯಡವಟ್ಟು ಮಾಡ್ಕೊಂಡ ಆರೋಪಿ

ಅಮೆರಿಕದ ಈಗಲ್ ಕಂಟ್ರಿ ಆಫ್ ಕೊಲರಾಡೋನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಡ್ರಗ್ಸ್ ಸೇವನೆ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರೆದುರು ತಾನು ನಿರಪರಾಧಿ ಅಂತಾ ಸಾಬೀತು ಮಾಡಲು ಬಂದಾತ ಯಡವಟ್ಟು ಮಾಡ್ಕೊಂಡಿದ್ದಾನೆ.

ಜಡ್ಜ್ ಎದುರೇ ಆತ ತನ್ನ ಟೊಪ್ಪಿಯಲ್ಲಿ ಅಡಗಿಸಿಕೊಂಡಿದ್ದ ಕೊಕೇನ್ ಡ್ರಗ್ಸ್ ಪ್ಯಾಕೆಟ್ ಕೆಳಕ್ಕೆ ಬಿದ್ದುಬಿಟ್ಟಿದೆ. ಆರೋಪಿ 43 ವರ್ಷದ ಜುವಾನ್ ಜೋಸ್ ಕಟಕಟೆಯಲ್ಲಿ ನಿಂತಿದ್ದ. ತಲೆಗೆ ಹಾಕಿದ್ದ ಹ್ಯಾಟ್ ತೆಗೆಯುತ್ತಿದ್ದಂತೆ ಅದರೊಳಗೆ ಪೇಪರ್ ನಲ್ಲಿ ಸುತ್ತಿದ್ದ ವಸ್ತುವೊಂದು ಕೆಳಕ್ಕೆ ಬಿದ್ದಿದೆ.

ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಪೇಪರ್ ಪೊಟ್ಟಣವನ್ನು ಬಿಚ್ಚಿ ನೋಡಿದ್ರು. ಅದರಲ್ಲಿ ಕೊಕೇನ್ ಇಡಲಾಗಿತ್ತು. ಕೂಡಲೇ ಪೊಲೀಸರು ಈ ವಿಷಯವನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಕೋರ್ಟ್ ಗೆ ಡ್ರಗ್ಸ್ ತಂದಿದ್ರಿಂದ ಮತ್ತಷ್ಟು ಸಂಕಷ್ಟ ಜುವಾನ್ ಗೆ ಎದುರಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...