alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನಾನವನ್ನೇ ಮಾಡದ ಪತ್ನಿಯಿಂದ ವಿಚ್ಛೇದನ ಕೇಳ್ತಿದ್ದಾನೆ ಪತಿ

ಸ್ವಚ್ಛತೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ಅದನ್ನು ನಿರ್ಲಕ್ಷಿಸಿದ್ರೆ ಸಂಬಂಧಗಳು ಕೂಡ ನಾಶವಾಗಬಹುದು. ತೈವಾನ್ ನ ಮಹಿಳೆಯೊಬ್ಬಳ ಬದುಕಿನಲ್ಲಿ ಕೂಡ ಇಂಥದ್ದೇ ಘಟನೆ ನಡೆದಿದೆ. ಸರಿಯಾಗಿ ಸ್ನಾನವನ್ನೇ ಮಾಡದ ಪತ್ನಿಯಿಂದ ವಿಚ್ಛೇದನ ಕೇಳಿ  ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದಾನಂತೆ.

ಪತ್ನಿ ಸ್ನಾನ ಮಾಡದೇ ಇರೋದ್ರಿಂದ ಮಕ್ಕಳನ್ನು ಹೊಂದಲು ಕೂಡ ಸಾಧ್ಯವಾಗುತ್ತಿಲ್ಲ ಅನ್ನೋದು ಅವನ ಆರೋಪ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಡೇಟಿಂಗ್ ಮಾಡ್ತಿದ್ದಾಗ ಆಕೆ ವಾರಕ್ಕೊಮ್ಮೆಯಾದ್ರೂ ಸ್ನಾನ ಮಾಡ್ತಿದ್ಲಂತೆ. ಮದುವೆ ಆದ್ಮೇಲೆ ವರ್ಷಕ್ಕೊಮ್ಮೆ ಸ್ನಾನ ಮಾಡಲು ಶುರು ಮಾಡಿದ್ಲು.

ವರ್ಷಕ್ಕೊಮ್ಮೆ ಬರೋಬ್ಬರಿ 6 ಗಂಟೆಗಳ ಕಾಲ ಆಕೆ ಸ್ನಾನ ಮಾಡುತ್ತಿದ್ಲು. ಪ್ರತಿದಿನವೂ ಹಲ್ಲುಜ್ಜುವ ಅಭ್ಯಾಸ ಅವಳಿಗೆ ಇರಲಿಲ್ಲ. ತಲೆಸ್ನಾನವನ್ನೂ ಮಾಡುತ್ತಿರಲಿಲ್ಲ. ಪತಿಗೆ ಕೆಲಸಕ್ಕೆ ಹೋಗಲು ಕೂಡ ಅವಕಾಶ ನೀಡ್ತಿಲ್ಲ ಆ ಮಹಿಳೆ. ಹಾಗಾಗಿ ದಂಪತಿ ನಿರುದ್ಯೋಗಿಗಳು. ಆಕೆಯ ತಾಯಿಯ ರುಣದಲ್ಲಿದ್ದೇನೆ ಅನ್ನೋದು ಪತಿಯ ಆರೋಪ.

ಇದರಿಂದ ರೋಸಿ ಹೋಗಿದ್ದ ಆತ 2015ರಲ್ಲಿ ಬೇರೆ ಮನೆ ಮಾಡಿ, ಕೆಲಸಕ್ಕೆ ಸೇರಿಕೊಂಡಿದ್ದ. ಆಗಲೂ ನೌಕರಿ ಬಿಡುವಂತೆ ಪತ್ನಿ ಪಟ್ಟು ಹಿಡಿದಿದ್ಲು. ಅದಕ್ಕೆ ಒಪ್ಪದ ಪತಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...