alex Certify
ಕನ್ನಡ ದುನಿಯಾ       Mobile App
       

Kannada Duniya

6 ವರ್ಷದ ಮಗುವಿನ ಪಾಲಿಗೆ ಆಪದ್ಬಾಂಧವನಾದ ಯುವಕ

ನಿಜ ಜೀವನದ ಹೀರೋಗಳಿರ್ತಾರಲ್ಲ ಅವರು ಕೆಲವು ಆಪತ್ತಿನ ಸನ್ನಿವೇಶಗಳಲ್ಲಿ ಮಾತ್ರ ಹುಟ್ಟಿಕೊಳ್ತಾರೆ. ಚೀನಾದ ಶಾಕ್ಸಿಂಗ್ ನಗರದ ಷೆಝಾಂಗ್ ಪ್ರಾಂತ್ಯದಲ್ಲಿ ನಡೆದಂತಾ ಒಂದು ಘಟನೆಯಲ್ಲಿ ಈ ಮಾತು ಮತ್ತೊಮ್ಮೆ ನಿಜವಾಗಿದೆ.

ಆ ಹೀರೋ ಏನು ಮಾಡಿದ ಅನ್ನೋ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರೋ ಈ ದೃಶ್ಯ ನಿಜಕ್ಕೂ ನೋಡುಗರನ್ನು ಗಾಬರಿಪಡಿಸುತ್ತೆ.

ಆರು ವರ್ಷದ ಮಗುವೊಂದು ಆಟವಾಡುತ್ತಾ ಕಾಲುವೆಯಲ್ಲಿ ಕಾಲು ಜಾರಿ ಬಿದ್ದುಹೋಗುತ್ತೆ. ಈ ಸಂದರ್ಭದಲ್ಲಿ ಆ ಸ್ಥಳದಲ್ಲಿ ಯಾರು ಕೂಡ ಇರೋದಿಲ್ಲ, ಮಗು ಇನ್ನೇನು ನೀರಿನಲ್ಲಿ ಮುಳುಗಿ ಸಾವನ್ನಪ್ಪಲಿದೆ ಅನ್ನೊ ಸಂದರ್ಭದಲ್ಲೇ ಅಲ್ಲೊಬ್ಬ ವ್ಯಕ್ತಿ ಬರ್ತಾರೆ.

ಬೈಕ್ನಲ್ಲಿ ಕಾಲುವೆ ಬಳಿ ಬರುತ್ತಿದ್ದ ಹಾಗೆ ಆ ವ್ಯಕ್ತಿ ಮಗುವನ್ನು ನೋಡಿ ಬೈಕ್ ನಿಲ್ಲಿಸಿ ಹಿಂದು ಮುಂದು ಯೋಚನೆ ಮಾಡದೆ ನೀರಿಗೆ ಧುಮುಕಿ ಮಗುವಿನ ಪ್ರಾಣ ಕಾಪಾಡ್ತಾನೆ. ಮಗುವನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದ ಬಳಿಕಷ್ಟೆ ಆ ವ್ಯಕ್ತಿ ಮಿಂಚಿ ಮರೆಯಾಗ್ತಾನೆ. ಈ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಆ ವ್ಯಕ್ತಿಯ ಸಾಹಸಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...