alex Certify
ಕನ್ನಡ ದುನಿಯಾ       Mobile App
       

Kannada Duniya

ತಿಗಣೆ ಬಿಟ್ಟು ಸರ್ಕಾರಿ ಅಧಿಕಾರಿಗಳಿಗೆ ಪಾಠ ಕಲಿಸಿದ್ದಾನೆ ಈತ….

bug

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ಅಕ್ರಮಗಳು ನಡೆಯುತ್ತಲೇ ಇವೆ. ಜನಸಾಮಾನ್ಯರ ಯಾವ ಕೆಲಸವೂ ಅಲ್ಲಿ ಸುಲಭದಲ್ಲಿ ಆಗೋದೇ ಇಲ್ಲ. ಸರ್ಕಾರಿ ನೌಕರರ ಕಾರ್ಯವೈಖರಿ ಬಗ್ಗೆ ಬೇಸರವಾದ್ರೆ ಜನ ಏನ್ಮಾಡ್ತಾರೆ ಹೇಳಿ? ಮನಸ್ಸಿನಲ್ಲೇ ಬೈದು ಸುಮ್ಮನಾಗ್ತಾರೆ.

ಆದ್ರೆ ಅಮೆರಿಕದಲ್ಲಿ ಮಾತ್ರ ಸರ್ಕಾರಿ ಕಚೇರಿಯ ಬೇಜವಾಬ್ಧಾರಿತನದ ಉತ್ತರದಿಂದ ಕೆರಳಿದ ವ್ಯಕ್ತಿಯೊಬ್ಬ ಜೀವಂತ ತಿಗಣೆಗಳನ್ನು ಅಲ್ಲಿಗೆ ತಂದು ಸುರಿದಿದ್ದಾನೆ. ಕೋಡ್ ಎನ್ಫೋರ್ಸ್ಮೆಂಟ್ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಅಪಾರ್ಟ್ ಮೆಂಟ್ ನಲ್ಲಿ ತಿಗಣೆಗಳ ಹಾವಳಿ ವಿಪರೀತವಾಗಿದೆ, ಅದನ್ನು ಓಡಿಸಲು ಸಹಾಯ ಮಾಡಿ ಅಂತಾ ಕೇಳಿದ್ದ.

ಸಹಾಯ ಮಾಡಲು ಸಾಧ್ಯವಿಲ್ಲ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಕೂಡಲೇ ಒಂದಷ್ಟು ಜೀವಂತ ತಿಗಣೆಗಳನ್ನು ತಂದು ಕಚೇರಿಯ ಕೌಂಟರ್ ನಲ್ಲಿ ಹಾಕಿದ್ದಾನೆ. ಒಂದಷ್ಟು ತಿಗಣೆಗಳು ಕೌಂಟರ್ ನಲ್ಲಿ ಕುಳಿತಿದ್ದ ಸಿಬ್ಬಂದಿಯ ಮೈಮೇಲೂ ಹರಿದಾಡಲಾರಂಭಿಸಿದ್ವು.

ಕೂಡಲೇ ಕಚೇರಿಯನ್ನು ಮುಚ್ಚಿ, ತಿಗಣೆಗಳನ್ನು ಕೊಲ್ಲಿಸಲಾಯ್ತು. ತಾನು ಅನುಭವಿಸ್ತಾ ಇರೋ ಕಷ್ಟ ಸರ್ಕಾರಿ ಅಧಿಕಾರಿಗಳಿಗೂ ಅರಿವಾಗಲಿ ಅನ್ನೋ ಕಾರಣಕ್ಕೆ ತಿಗಣೆಗಳನ್ನು ತಂದು ಬಿಟ್ಟಿದ್ದಾಗಿ ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...