alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಭೋಗದ ನಡುವೆಯೇ ಬಂದೆರಗಿತ್ತು ಸಾವು

taiwan

ಸಂಭೋಗ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಸಂಶೋಧಕರ ಅಭಿಪ್ರಾಯ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ ದೇಹದಲ್ಲಿ ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ. ಅಷ್ಟೇ ಅಲ್ಲ ಸಂಭೋಗದಿಂದ ಹೃದಯಾಘಾತದ ಅಪಾಯ ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು. ಅಪರೂಪದ ಪ್ರಕರಣಗಳಲ್ಲಿ ಸಂಭೋಗ ನಡೆಸಿ ಒಂದು ಗಂಟೆಯ ಬಳಿಕ ಹೃದಯಾಘಾತವಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಆದ್ರೆ ತೈವಾನ್ ನಲ್ಲಿ ಲೈಂಗಿಕ ಸಂಬಂಧ ವ್ಯಕ್ತಿಯೊಬ್ಬನ ಪ್ರಾಣಕ್ಕೇ ಎರವಾಗಿದೆ. ಫು ಎಂಬ ಯುವತಿ ಹಾಗೂ 22 ವರ್ಷದ ಯುವಕ ಹುವಾಂಗ್ ಬೆಳಗಿನ ಜಾವ 5 ಗಂಟೆಗೆ ಲೈಂಗಿಕ ಸಂಬಂಧ ಬೆಳೆಸಿದ್ರು. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಹುವಾಂಗ್ ಗೆ ಹೃದಯಾಘಾತವಾಗಿದೆ.

ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವೈದ್ಯರು ಕೂಡ ಆತ ಹೃದಯಾಘಾತದಿಂದಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ತೀವ್ರ ಚಳಿಗಾಲವಾಗಿದ್ದರಿಂದ ಸಾವು ಸಂಭವಿಸಿದೆ ಅಂತಾನೂ ವೈದ್ಯರು ಹೇಳಿದ್ದಾರೆ. ಆದ್ರೆ ಹುವಾಂಗ್ ಕುಟುಂಬಸ್ಥರು ಮಾತ್ರ ಈ ಬಗ್ಗೆ ತನಿಖೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...