alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನೆಮಾ ಹಾಲ್ ನ ಸೀಟಿನಲ್ಲಿ ಸಿಕ್ಕಿಹಾಕಿಕೊಂಡ್ತು ತಲೆ…!

ಬರ್ಮಿಂಗ್ಹ್ಯಾಮ್ ನಲ್ಲಿ ಸಿನೆಮಾ ಹಾಲ್ ನ ಎಲೆಕ್ಟ್ರಾನಿಕ್ ಸೀಟಿನಲ್ಲಿ ತಲೆ ಸಿಕ್ಕಿಹಾಕಿಕೊಂಡಿದ್ರಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಸ್ಟಾರ್ ಸಿಟಿ ಕಾಂಪ್ಲೆಕ್ಸ್ ನಲ್ಲಿರೋ ಚಿತ್ರಮಂದಿರವೊಂದರಲ್ಲಿ ಈ ದುರಂತ ಸಂಭವಿಸಿದೆ.

ಗೋಲ್ಡ್ ಕ್ಲಾಸ್ ಸೀಟಿನಲ್ಲಿ ಕುಳಿತು ಆತ ಸಿನೆಮಾ ನೋಡಿದ್ದ. ಸಿನೆಮಾ ಮುಗಿದು ಮೇಲೇಳಬೇಕು ಎನ್ನುವಷ್ಟರಲ್ಲಿ ಅವನ ಮೊಬೈಲ್ ಕೆಳಕ್ಕೆ ಬಿದ್ದಿತ್ತು. ಅದನ್ನು ಎತ್ತಿಕೊಳ್ಳಲು ಬಗ್ಗಿದ್ದಾನೆ. ಆಗ ಅವನ ತಲೆ ಎಲೆಕ್ಟ್ರಾನಿಕ್ ಫುಟ್ ರೆಸ್ಟ್ ನಲ್ಲಿ ಸಿಕ್ಕಿಹಾಕಿಕೊಂಡಿದೆ.

ಆತನ ಸ್ನೇಹಿತರು ಎಷ್ಟು ಕಷ್ಟಪಟ್ರೂ ಅದನ್ನು ತೆಗೆಯಲು ಸಾಧ್ಯವಾಗಿಲ್ಲ. ನಂತರ ಅದನ್ನು ಮುರಿದು ತಲೆಯನ್ನು ಹೊರತೆಗೆಯಲಾಯ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...