alex Certify
ಕನ್ನಡ ದುನಿಯಾ       Mobile App
       

Kannada Duniya

ಗಡಿಬಿಡಿಯಲ್ಲಿ ಮಾಡಿದ ಯಡವಟ್ಟಿನಿಂದ ಕಂಪನಿಯೇ ಮುಳುಗೋಯ್ತು

rong entry

ಯಾವುದೇ ಕೆಲಸ ಮಾಡುವ ಸಂದರ್ಭದಲ್ಲಿ ಗಮನ ಇಟ್ಟು ಕೆಲಸ ಮಾಡಬೇಕು. ಇಲ್ಲದಿದ್ದರೆ ಹೇಗೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ನಿದರ್ಶನವಾಗಲಿದೆ. ಅಷ್ಟಕ್ಕೂ ಏನಿದು ಪ್ರಕರಣ ಎಂಬುದನ್ನು ತಿಳಿಯಲು ಮುಂದೆ ಓದಿ.

ಕಂಪನಿಯೊಂದರ ಮಾಲೀಕ, ರಾಂಗ್ ಪಾಸ್ ವರ್ಡ್ ಎಂಟ್ರಿ ಮಾಡಿದ ತಪ್ಪಿಗೆ ಇಡೀ ಕಂಪನಿಯೇ ಮುಳುಗಿ ಹೋಗಿದೆ. ಲಂಡನ್ ನ ಮಾರ್ಕೊ ಮರ್ಸಾಲ ಎಂಬ ವ್ಯಕ್ತಿ ವೆಬ್ ಸೇವಾ ಕಂಪನಿ ಹೊಂದಿದ್ದರು. ಆ ಕಂಪನಿಯಲ್ಲಿ 1535 ಗ್ರಾಹಕರಿದ್ದರು. ಆನ್ ಲೈನ್ ಕಂಪನಿಯಾಗಿದ್ದರಿಂದ ಎಲ್ಲಾ ವ್ಯವಹಾರ, ಮಾಹಿತಿ ದಾಖಲೆಗಳು ಆನ್ ಲೈನ್ ನಲ್ಲೇ ದಾಖಲಾಗಿದ್ದವು. ಅಲ್ಲದೇ, 1535 ಗ್ರಾಹಕರ ಮಾಹಿತಿ ಕೂಡ ಅದರಲ್ಲಿಯೇ ಇತ್ತು. ಮಾರ್ಕೊ ಯಾವುದೋ ಗಡಿಬಿಡಿಯಲ್ಲಿ ಪಾಸ್ ವರ್ಡ್ ತಪ್ಪಾಗಿ ಎಂಟ್ರಿ ಮಾಡಿದ್ದಾರೆ.

ಇದರಿಂದಾಗಿ ಕಂಪನಿಯೇ ಸಂಪೂರ್ಣ ಮುಳುಗಿಹೋಗಿದೆ. 1535 ಗ್ರಾಹಕರ ಮಾಹಿತಿಯೇ ಮಾಯವಾಗಿದೆ. ತಜ್ಞರು ಏನು ಲೋಪವಾಗಿದೆ ಎಂಬುದನ್ನು ಕಂಡು ಹಿಡಿಯಲು ಎಷ್ಟೆಲ್ಲಾ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಸಣ್ಣತಪ್ಪಿನಿಂದ ಆದ ಯಡವಟ್ಟಿಗೆ ಮಾರ್ಕೊ ಹಣೆ ಚಚ್ಚಿಕೊಳ್ಳುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...