alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ತಾಯಿಯ ಶವಪೆಟ್ಟಿಗೆ ಮೈಮೇಲೆ ಬಿದ್ದು ಮಗನ ಸಾವು

ಇಂಡೋನೇಷಿಯಾದಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿಯ ಅಂತ್ಯ ಸಂಸ್ಕಾರಕ್ಕೆ ಅಣಿಯಾಗುತ್ತಿದ್ದ ಮಗ, ಆಕೆಯ ಮೃತದೇಹವಿದ್ದ ಶವ ಪೆಟ್ಟಿಗೆ ಮೈ ಮೇಲೆ ಬಿದ್ದ ಕಾರಣ ಸಾವನ್ನಪ್ಪಿದ್ದಾನೆ.

ಸುಲವೇಸಿ ದ್ವೀಪದಲ್ಲಿ ಈ ಘಟನೆ ನಡೆದಿದ್ದು, ನಲವತ್ತು ವರ್ಷದ ಸಮೇನ್ ಕುಂಡರುರಾ ಎಂಬಾತ ಸಾವನ್ನಪ್ಪಿದ ದುರ್ದೈವಿ. ಈತನ ತಾಯಿ ಭಾನುವಾರದಂದು ಸಾವನ್ನಪ್ಪಿದ್ದು, ಅಂತಿಮ ಸಂಸ್ಕಾರಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿತ್ತು.

ಅಂತಿಮ ಸಂಸ್ಕಾರಕ್ಕೂ ಮುನ್ನ ಸಂಪ್ರದಾಯದ ಪ್ರಕಾರ ವಿಧಿವಿಧಾನಗಳನ್ನು ನೆರವೇರಿಸಲು ಮೃತ ದೇಹವಿದ್ದ ಶವಪೆಟ್ಟಿಗೆಯನ್ನು ಬೊಂಬಿನಿಂದ ಮಾಡಲಾಗಿದ್ದ ಏಣಿಯ ಮೂಲಕ ಮಾಳಿಗೆಗೆ ತೆಗೆದುಕೊಂಡು ಹೋಗುವ ವೇಳೆ ಏಣಿ ಮುರಿದ ಕಾರಣ ಶವಪೆಟ್ಟಿಗೆ ಸಮೇನ್ ಮೇಲೆ ಬಿದ್ದಿದೆ.

ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈಗ ತಾಯಿ-ಮಗನ ಅಂತ್ಯಸಂಸ್ಕಾರವನ್ನು ಒಟ್ಟಿಗೇ ನೆರವೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...